ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಯುವಕ‌ ಶವವಾಗಿ ಪತ್ತೆ..!

ಬೆಳಗಾವಿ: ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಯುವಕ ಇಂದು ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾನೆ. ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕೊಳವಿ‌ ಗ್ರಾಮದಲ್ಲಿ ಸತತವಾಗಿ ಮಳೆ ಸುರಿದ ಕಾರಣ ಸೆ.9ರಂದು ಮಳೆಯ ರಕ್ಷಣೆಗಾಗಿ ಹಳ್ಳದ ಪಕ್ಕದ ಮರದ ಕೆಳಗೆ ನಿಂತಿದ್ದ ಯುವಕ ದಿಢೀರ್ ಮಳೆಯಿಂದ ಹಳ್ಳದ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದ.

ಕೊಳವಿ ಗ್ರಾಮದ ದುಂಡಪ್ಪಾ ಮಾಲದಿನ್ನಿ (25) ಇದೀಗ ಶವವಾಗಿ ಪತ್ತೆಯಾಗಿರುವ ಯುವಕ, ಈ ಯುವಕನಿಗೆ ಮೂರು ದಿನಗಳಿಂದ ಶೋಧಕಾರ್ಯದಲ್ಲಿ ತೊಡಗಿದ್ದ ಅಗ್ನಿಶಾಮಕ ಸಿಬ್ಬಂದಿ ಇಂದು ಮುಂಜಾನೆ ಬೆಣಚಿನಮರಡಿ-ಕೊಳವಿ ಮಾರ್ಗ ಮಧ್ಯೆದ ಹಳ್ಳದಲ್ಲಿ ಯುವಕನ ಶವ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಗೋಕಾಕ್ ಗ್ರಾಮೀಣ ‌ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟ‌ನೆ ನಡೆದಿತ್ತು.

Edited By : Manjunath H D
PublicNext

PublicNext

11/09/2022 12:40 pm

Cinque Terre

39.52 K

Cinque Terre

0

ಸಂಬಂಧಿತ ಸುದ್ದಿ