ಬೆಂಗಳೂರು : ಒಂದು ಕಡೆ ಮಳೆರಾಯ ಅಬ್ಬರಿಸಿ ಬೊಬ್ಬರೆಯುತ್ತಿದ್ದಾನೆ. ಇದರ ಮಧ್ಯೆ ಜನರಿಗೆ ಕುಡಿಯಲು ನೀರು ಕೂಡ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ.ಇಂದು ಮತ್ತು ನಾಳೆ ಯಶವಂತಪುರ,ಮಲೇಶ್ವರಂ ಸೇರಿದಂತೆ ಹಲವೆಡೆ ಜನರಿಗೆ ಕುಡಿಯಲು ನೀರು ಸಿಗಲ್ಲ. ಜಲಮಂಡಳಿಯ ಜಲರೇಚಕ ಯಂತ್ರಗಾರ ಸಂಪೂರ್ಣ ಜಲಾವೃತವಾಗಿದ್ದು,ಮಂಡ್ಯ ಜಿಲ್ಲೆ ಮಾಳವಳ್ಳಿ ತಾಲೂಕಿನ ಟಿಕ್ಕೆ ಹಳ್ಳಿಯಲ್ಲಿರುವ ಕೇಂದ್ರದಿಂದ ಇಷ್ಟು ದಿನ ನಗರದಕ್ಕೆ ನೀರು ಸರಬರಾಜು ಆಗುತ್ತಿತ್ತು.ಆದ್ರೆ ಜಲರೇಚಕ ಯಂತ್ರಗಾರ ಕೆಟ್ಟು ನಿಂತಿರುವುದರಿಂದ ಈಗ ನಗರದಲ್ಲಿ ಜನರಿಗೆ ಎರಡು ದಿನ ಕುಡಿಯಲು ನೀರು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಹೀಗಾಗಿ ಸಿಎಂ ಬಸವರಾಜ್ ಬೊಮ್ಮಾಯಿ ಮಂಡ್ಯಗೆ ಹೋಗಿ ಪರಿಶೀಲನೆ ಮಾಡುವ ಕಾರ್ಯ ಮಾಡ್ತಾರೆ ಎಂಬ ಮಾಹಿತಿಯೂ ಇದೆ.
Kshetra Samachara
05/09/2022 05:56 pm