ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕರ್ನಾಟಕದ ಜನರಿಗೆ ಮತ್ತೆ ಕರೆಂಟ್ ಶಾಕ್

ಬೆಂಗಳೂರು: ನಾಳೆಯಿಂದ ರಾಜ್ಯದ ಜನರಿಗೆ ಕರೆಂಟ್ ಶಾಕ್. ರಾಜ್ಯದಲ್ಲಿ ಜುಲೈ 1ರಿಂದ ಮತ್ತೆ ವಿದ್ಯುತ್ ದರ ಏರಿಕೆ ಪ್ರತಿ ಯೂನಿಟ್ ವಿದ್ಯುತ್ ಬಳಕೆಗೆ 19ರಿಂದ 31 ಪೈಸೆ ಹೆಚ್ಚಳ ಮಾಡಲಾಗಿದೆ. ಪ್ರತಿ ತಿಂಗಳು 100 ಯೂನಿಟ್ ಬಳಸುವ ಗ್ರಾಹಕರು ಇನ್ಮುಂದೆ 19 ರಿಂದ 31 ರೂ. ಪಾವತಿಸಬೇಕು. ಕಳೆದ 2 ವರ್ಷಗಳಲ್ಲಿ ಕಲ್ಲಿದ್ದಲು ದರ ಹೆಚ್ಚಳ ಹಿನ್ನೆಲೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಎಸ್ಕಾಂಗಳಿಂದ ಪ್ರಸ್ತಾವನೆ ಎಸ್ಕಾಂಗಳ ಮನವಿ ಮೇರೆಗೆ ದರ ಏರಿಕೆ ಮಾಡಿದ KERC.

ಹಾಗಾದ್ರೆ ಎಸ್ಕಾಂಗಳು ಎಷ್ಟು ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು? ನೋಡೋದಾದ್ರೆ.

ಪ್ರತಿ ಯೂನಿಟ್‌ಗೆ 38ರಿಂದ 55 ಪೈಸೆಗೆ ಪ್ರಸ್ತಾವನೆ ಕೋರಿಕೆ ಮಾಡಲಾಗಿತ್ತು.

- ಬೆಸ್ಕಾಂ 55.28 ಪೈಸೆ

- ಮೆಸ್ಕಾಂ 38.98 ಪೈಸೆ

- ಸೆಸ್ಕಾಂ 40.47 ಪೈಸೆ

- ಹೆಸ್ಕಾಂ 49.54 ಪೈಸೆ

- ಗೆಸ್ಕಾಂ 39.36 ಪೈಸೆ.

ವಿದ್ಯುತ್ ದರ ಹೆಚ್ಚಳ ಮಾಡಲಾಗಿದೆ.

ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.

Edited By : Vijay Kumar
PublicNext

PublicNext

30/06/2022 08:14 pm

Cinque Terre

22.01 K

Cinque Terre

3