ಬೆಂಗಳೂರು: ಸಿಲಿಕಾನ್ ಸಿಟಿಯ ಪ್ರಮುಖ ಪ್ರದೇಶದಲ್ಲಿ ಜೂನ್-27 ರಿಂದ ಜೂನ್-29 ರವೆಗೂ ವಿದ್ಯುತ್ ವ್ಯತ್ಯಯ ಆಗಲಿದೆ. ವಿದ್ಯುತ್ ನಿರ್ವಹಣೆ,ಕೇಬಲ್ ಹಾಕುವುದು ಇವೆಲ್ಲ ಕೆಲಸ ಇರೋದ್ರಿಂದಲೇ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
ಬೆಂಗಳೂರು ದಕ್ಷಿಣ ವಲಯದ ಪ್ರದೇಶಗಳು,ಕೋರಮಂಗಲ ಬ್ಲಾಕ್ 3,4,5,6 ಹಾಗೂ ಸಕ್ರಾ ಆಸ್ಪತ್ರೆ,ಹೊರವರ್ತುಲದಲ್ಲಿರೋ ಸಲಾರ್‌ಪುರಿಯಾದಲ್ಲಿ ಬೆಳಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆವರೆಗೂ ವಿದ್ಯುತ್ ವ್ಯತ್ಯಯ ಆಗಲಿದೆ.
ಪೂರ್ವವಲಯದ ಪ್ರದೇಶದಲ್ಲಿ ಬೆಳಗ್ಗೆ 11 ರಿಂದ ಸಂಜೆ 5 ವರೆಗೆ ವಿದ್ಯುತ್ ಇರೋದಿಲ್ಲ. ಪಶ್ಚಿಮ ವಲಯದ ಪ್ರದೇಶದಲ್ಲಿ ಬೆಳಗ್ಗೆ 11 ರಿಂದ ಸಂಜೆ 5 ಗಂಟೆವರೆಗೂ ವಿದ್ಯುತ್ ಸರಬರಾಜು ವ್ಯತ್ಯಯ ಆಗಲಿದೆ.
Kshetra Samachara
25/06/2022 09:19 pm