ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕರೆಂಟ್ ಕಟ್ ಆಗುವ ಸಮಸ್ಯೆ ಸಾಮಾನ್ಯವಾಗಿತ್ತು. ಸದ್ಯ ನಗರದ ಹಲವೆಡೆ ಪವರ್ ಕಟ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈಗಾ ರಾಜಾಜಿನಗರ, ಇಂದಿರಾನಗರ, ಹೆಬ್ಬಾಳ, ರಾಜರಾಜೇಶ್ವರಿ ನಗರ, ಶಿವಾಜಿನಗರ ಮತ್ತು ಹೆಬ್ಬಾಳ ಪ್ರದೇಶಗಳಲ್ಲಿ ಪವರ್ ಕಟ್ ವಿಚಾರದ ಪರಿಸ್ಥಿತಿ ಇದೀಗ ಸುಧಾರಿಸಿದೆ.
ಕಂಬದ ಮೂಲಕ ಜೋತುಬೀಳುವ ವಿದ್ಯುತ್ ತಂತಿಗಳನ್ನು ನೆಲದಡಿಗೆ ಅಳವಡಿಸುವ ಬೆಸ್ಕಾಂನ ಮೊದಲ ಮತ್ತು ಎರಡನೇ ಹಂತದ ಕಾಮಗಾರಿಗಳು ಪೂರ್ಣಗೊಳ್ಳುವ ಹಂತಕ್ಕೆ ಬಂದಿವೆ. ಪರೀಕ್ಷೆಗಳು ಆರಂಭವಾದ ಹಿನ್ನೆಲೆಯಲ್ಲಿ ಲೋಡ್ ಶೆಡಿಂಗ್ಗೆ ವಿರೋಧ ವ್ಯಕ್ತವಾದ ಕಾರಣ ಸುಮಾರು ಒಂದು ತಿಂಗಳು ಕಾಮಗಾರಿಯ ವೇಗಕ್ಕೆ ಕಡಿವಾಣ ಬಿದ್ದಿತ್ತು. ಪರೀಕ್ಷೆ ಅವಧಿಯಲ್ಲಿ ಮಕ್ಕಳ ಓದಿಗೆ ತೊಂದರೆಯಾಗುತ್ತದೆ ಎನ್ನುವ ಕಾರಣಕ್ಕೆ ಬೆಸ್ಕಾಂ ಸಾಮಾನ್ಯವಾಗಿ ಪವರ್ ಕಟ್ ಮಾಡುವುದಿಲ್ಲ.
ಪರೀಕ್ಷೆ ಮುಗಿದ ನಂತರ ಮತ್ತೆ ಕಾಮಗಾರಿಯನ್ನು ಬೆಸ್ಕಾಂ ಆರಂಭಿಸಿತು. ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಜೂನ್ ತಿಂಗಳಿನಿಂದ ಮಳೆ ಬಿರುಸಾಗಲಿದೆ. ವಿದ್ಯುತ್ ವಿತರಣಾ ಜಾಲ ಸುಧಾರಿಸುವ ಎರಡೂ ಹಂತಗಳ ಕಾಮಗಾರಿಯನ್ನು ಮುಂಗಾರು ಆರಂಭವಾಗುವುದರೊಳಗೆ ಮುಗಿಸುವುದು ಬೆಸ್ಕಾಂನ ಗುರಿಯಾಗಿದೆ. ಆಗಸ್ಟ್ 2022ರ ಒಳಗೆ ಮುಗಿಸಬೇಕು ಎಂದುಕೊಂಡಿದ್ದ 3 ಮತ್ತು 4ನೇ ಹಂತದ ಕಾಮಗಾರಿಗಳೂ ಸುಮಾರು 6 ತಿಂಗಳು ತಡವಾಗುವ ಸಾಧ್ಯತೆಯಿದೆ. ಮುಕ್ಕಾಲು ಪಾಲು ಕಾಮಗಾರಿ ಪೂರ್ಣಗೊಂಡಿದ್ದು, ಶೀಘ್ರ ಸಂಪೂರ್ಣಗೊಳ್ಳಲಿದೆ.
Kshetra Samachara
15/04/2022 02:39 pm