ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು ದಕ್ಷಿಣ : ಒಂದು ತಿಂಗಳಿಂದ ರಾತ್ರಿ ಹಗಲೆನ್ನದೆ ಪವರ್ ಕಟ್: ಬೆಸ್ಕಾಂಗೆ ದೂರು ನೀಡಿದ್ರೂ ನೋ ಯೂಸ್

ಬೆಂಗಳೂರು: ಬೆಂಗಳೂರು ದಕ್ಷಿಣದ ಹಲವು ಬಡಾವಣೆಗಳಲ್ಲಿ ರಾತ್ರಿ ಹಗಲೆನ್ನದೆ ವಿದ್ಯುತ್‌ ಕಡಿತ ಮಾಡುತ್ತಿರುವುದರಿಂದ ಜನತೆ ಕಂಗಾಲಾಗಿದ್ದಾರೆ. ಒಂದು ತಿಂಗಳಿಂದ ಯಾವುದೇ ಮುನ್ಸೂಚನೆ ನೀಡದೆ ಪವರ್‌ ಕಟ್‌ ಮಾಡುತ್ತಿರುವುದರಿಂದ ಜನರು ಬೆಸ್ಕಾಂಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಸಾಕಷ್ಟು ಬಾರಿ ಜನರು ಬೆಸ್ಕಾಂಗೆ ದೂರು ನೀಡಿದರೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ.

ಬಿಟಿಎಂ ಲೇಔಟ್, ಜೆಪಿ ನಗರ, ಮಡಿವಾಳ, ವಿಜಯ ಬ್ಯಾಂಕ್ ಲೇಔಟ್ ಪ್ರದೇಶಗಳಲ್ಲಿ ಹಗಲು ರಾತ್ರಿ ವಿದ್ಯುತ್ ಕಡಿತ ಸಾಮಾನ್ಯವಾಗಿದೆ. ಅನೇಕ ಜನರು ವರ್ಕ್ ಫ್ರಂ ಹೋಂ ನಲ್ಲಿರೋದ್ರಿಂದ ವಿದ್ಯುತ್ ಕಡಿತ ಸಾಕಷ್ಟು ಸಮಸ್ಯೆಯನ್ನ ತಂದೊಡ್ಡುತ್ತಿದೆ. ಕೂಡಲೇ ಬೆಸ್ಕಾಂ ಈ ಬಗ್ಗೆ ಗಮನಹರಿಸಬೇಕು ಅನ್ನೋದು ಇಲ್ಲಿನ ಜನರ ಆಗ್ರಹವಾಗಿದೆ.

ನವೀನ್, ಪಬ್ಲಿಕ್ ನೆಕ್ಸ್ಟ್, ಬೆಂಗಳೂರು

Edited By : Manjunath H D
PublicNext

PublicNext

24/03/2022 09:54 pm

Cinque Terre

30.29 K

Cinque Terre

0

ಸಂಬಂಧಿತ ಸುದ್ದಿ