ಬೆಂಗಳೂರು :ಕೆ.ಆರ್.ಪುರಂ ಬಳಿ ಕೊಳವೆ ಜೋಡಣೆ ಕಾರ್ಯ ಹಾಗೂ ಟಿ.ಕೆ.ಹಳ್ಳಿಯಲ್ಲಿನ 2,500 ಮಿ.ಮೀಟರ್ ವ್ಯಾಸದ ಬಟರ್ ಪ್ಲೈ ವಾಲ್ವ್ ಬೈಪಾಸ್ ಮಾರ್ಗದ ಕೊಳವೆ ತುಕ್ಕು ಹಿಡಿದಿದ್ದು, ಬುಧವಾರ ಬದಲಾವಣೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.
ಈ ಹಿನ್ನೆಲೆಯಲ್ಲಿ ವಿವಿಧಡೆ ಕಾವೇರಿ ಕುಡಿಯುವ ನೀರಿನ ಪೂರೈಕೆಯಲ್ಲಿ ಬೆಳಗ್ಗೆ 3 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ವ್ಯತ್ಯಯ ಉಂಟಾಗಲಿದೆ ಎಂದು ಜಲಮಂಡಳಿ ತಿಳಿಸಿದೆ.
ಯಲಹಂಕ,ಜಕ್ಕೂರು, ಬ್ಯಾಟರಾಯನಪುರ, ಬಿಇಎಲ್, ದಾಸರಹಳ್ಳಿ, ಮಲ್ಲಸಂದ್ರ, ಬಾಗಲಗುಂಟೆ, ಪೀಣ್ಯ, ಚೊಕ್ಕಸಂದ್ರ, ಹೆಗ್ಗನಹಳ್ಳಿ, ಕೆಂಗೇರಿ, ಉಲ್ಲಾಳ, ನಂದಿನಿ ಲೇಔಟ್, ಆರ್.ಆರ್. ನಗರ ಮಲ್ಲತಹಳ್ಳಿ, ಜೆ.ಪಿ.ನಗರ, ಕೂಡ್ಲು,ಮಹದೇವಪುರ, ಕೆ.ಅರ್.ಪುರಂ, ನಾಗಾವರ, ವೈಟ್ ಪೀಲ್ಡ್ ಸೇರಿದಂತೆ ಹಲವೆಡೆ ನೀರಿನ ವ್ಯತ್ಯಯ ಆಗಲಿದೆ.
Kshetra Samachara
28/12/2021 10:16 am