ಬೆಂಗಳೂರು: ವಿವಿಧ ವಸ್ತುಗಳ ಬೆಲೆ ಏರಿಕೆಯಿಂದ ರಾಜ್ಯದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಬೆಲೆ ಏರಿಕೆಗೆ ಜನರು ಕಂಗೆಟ್ಟಿದ್ದಾರೆ. ಈ ಮಧ್ಯೆ ಬೆಂಗಳೂರಿಗರಿಗೆ ವಿದ್ಯುತ್ ಬೆಲೆ ಏರಿಕೆಯ ಶಾಕ್ ತಟ್ಟಲಿದೆ.
ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆ, ಗ್ಯಾಸ್ ಸಿಲಿಂಡರ್ ದರ ಏರಿಕೆ, ಹೋಟೆಲ್ ಊಟ ರೇಟ್ ಹೆಚ್ಚಳ, ಆಟೋ ಚಾರ್ಜ್ ಏರಿಕೆಯಿಂದ ದುಬಾರಿಯಾಗಿದ್ದ ಬೆಂಗಳೂರು ಬದುಕು ಮತ್ತೊಂದು ಬೆಲೆ ಏರಿಕೆಯನ್ನು ತಡೆದುಕೊಳ್ಳಲೇಬೇಕಾಗಿದೆ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) 2022ರಲ್ಲಿ ಪ್ರತಿ ಯೂನಿಟ್‌ಗೆ 1.58 ರೂ.ಗಳ ವಿದ್ಯುತ್ ದರವನ್ನು ಹೆಚ್ಚಿಸುವಂತೆ ಕೋರಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್‌ಸಿ)ಗೆ ಪ್ರಸ್ತಾವನೆವನ್ನು ಸಲ್ಲಿಸಿದೆ ಎನ್ನಲಾಗಿದೆ.
ಕೆಇಆರ್‌ಸಿ ಅರ್ಜಿಯ ಆಧಾರದ ಮೇಲೆ ರಾಜ್ಯದ ವಿವಿಧ ಭಾಗಗಳಲ್ಲಿ ವಿಚಾರಣೆ ನಡೆಸಿ ಅಂತಿಮ ಸುಂಕದ ಆದೇಶವನ್ನು ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಪ್ರಕಟಿಸುವ ನಿರೀಕ್ಷೆಯಿದೆ. ಕಳೆದ ವರ್ಷ ಬೆಸ್ಕಾಂ ಪ್ರತಿ ಯೂನಿಟ್‌ಗೆ 1.35 ರೂ. ಹೆಚ್ಚಳಕ್ಕೆ ಕೋರಿದರೆ, ಕೆಇಆರ್‌ಸಿ ಕೇವಲ 30 ಪೈಸೆಗೆ ಅನುಮೋದನೆ ನೀಡಿತ್ತು.
Kshetra Samachara
11/12/2021 10:27 pm