ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರಿನಲ್ಲಿ ಇಂದಿನಿಂದ ಮೂರು ದಿನ ಪವರ್ ಕಟ್: ಯಾವೆಲ್ಲ ಏರಿಯಾ? ಇಲ್ಲಿದೆ ಮಾಹಿತಿ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಬಹುತೇಕ ಪ್ರದೇಶಗಳಲ್ಲಿ ಇಂದಿನಿಂದ ಮೂರು ದಿನ (ನ. 17 ಬುಧವಾರದವರೆಗೂ) ವಿದ್ಯುತ್ ವ್ಯತ್ಯಯವಾಗಲಿದೆ. ಈ ಬಗ್ಗೆ ಬೆಸ್ಕಾಂ ಮಾಹಿತಿ ನೀಡಿದೆ.

ಯಾವೆಲ್ಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ?:

ಬೆಂಗಳೂರಿನ ಟೀಚರ್ಸ್​ ಕಾಲೋನಿ, ಶ್ರೀನಿವಾಸನಗರ, ಬ್ಯಾಂಕ್ ಕಾಲೋನಿ, ಕತ್ರಿಗುಪ್ಪೆ ಮುಂತಾದ ಏರಿಯಾಗಳಲ್ಲಿ ಇಂದು ಬೆಸ್ಕಾಂ ಮತ್ತು ಕೆಪಿಟಿಸಿಎಲ್​ನ ಕೇಬಲ್ ಕನ್ವರ್ಷನ್ ಕೆಲಸ ನಡೆಯುತ್ತಿರುವುದರಿಂದ ಇಂದು ಪವರ್ ಕಟ್ ಇರಲಿದೆ. ಇಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೂ ಜಕ್ಕಸಂದ್ರ, ಹೆಚ್​ಎಸ್​ಆರ್​ ಸೆಕ್ಟರ್ 5, ಟೀಚರ್ಸ್ ಕಾಲೋನಿ, ವೆಂಕಟಾಪುರ ಭಾಗಗಳು, ಮೀನಾಕ್ಷಿ ಲೇಔಟ್, ಮೈಸೂರು ಬ್ಯಾಂಕ್ ಕಾಲೋನಿ, ಶ್ರೀನಿವಾಸನಗರ, ಕತ್ರಿಗುಪ್ಪೆ, ಆವಲಹಳ್ಳಿ, ಎಸ್​ಬಿಐ ಲೇಔಟ್, ಬಿಳೇಕಹಳ್ಳಿಯಲ್ಲಿ ಪವರ್ ಕಟ್ ಇರಲಿದೆ.

ನಾಳೆ ಅಂದರೆ ಮಂಗಳವಾರ ಬೆಂಗಳೂರಿನ ಎಚ್ಎಸ್ಆರ್ ಲೇಔಟ್ ಸೆಕ್ಟರ್ 6, ಬಿಡಿಎ ಅಂಜನಾಪುರ, ವೀವರ್ಸ್ ಕಾಲೋನಿ, ಕೃಷ್ಣಪ್ಪ ಲೇಔಟ್, ಮೀನಾಕ್ಷಿ ಲೇಔಟ್, ಆವಲಹಳ್ಳಿಯಲ್ಲಿ ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸಂಪರ್ಕ ಇರುವುದಿಲ್ಲ.

ಬುಧವಾರ (ನ. 17) ಹೆಚ್ಎಸ್ಆರ್ ಲೇಔಟ್ 17ನೇ ಕ್ರಾಸ್, ಅಂಜನಾಪುರ 3ನೇ ಬ್ಲಾಕ್, ಜಯರಾಮ ರೆಡ್ಡಿ ಲೇಔಟ್, ಜಿಬಿ ಪಾಳ್ಯ ರಸ್ತೆ, ರಾಘವನ ಪಾಳ್ಯ, ಆವಲಹಳ್ಳಿ, ಸಹಾರಾ ಬೇಕರಿ ರಸ್ತೆಯಲ್ಲಿ ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ತಿಳಿಸಿದೆ.

Edited By : Vijay Kumar
Kshetra Samachara

Kshetra Samachara

15/11/2021 02:25 pm

Cinque Terre

160

Cinque Terre

0

ಸಂಬಂಧಿತ ಸುದ್ದಿ