ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿಲಿಕಾನ್ ಸಿಟಿಯಲ್ಲಿ ಅ. 16 ರಿಂದ 22ರವರೆಗೆ ಕರೆಂಟ್ ಇರಲ್ಲಾ

ಬೆಂಗಳೂರು: ಬೆಂಗಳೂರಿಗರಿಗೆ ಈ ವೀಕೆಂಡ್ ನಿಂದ 1 ವಾರ ಪವರ್ ಕಟ್ ಸಮಸ್ಯೆ ಎದುರಾಗಲಿದೆ.

ಇದೇ ಶನಿವಾರದಿಂದ ಅ. 22ರವರೆಗೂ ಬೆಂಗಳೂರಿನ ಹಲವು ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಮುಂದಿನ ವಾರ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ, ಹೆಚ್ ಎಸ್ಆರ್ ಲೇಔಟ್, ಬೊಮ್ಮನಹಳ್ಳಿ, ಬಿಟಿಎಂ ಲೇಔಟ್, ಜಂಬೂಸವಾರಿ ದಿಣ್ಣೆ ಸೇರಿ ಹಲವು ಏರಿಯಾಗಳಲ್ಲಿ ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಅ. 16ರಂದು ಹೊಂಗಸಂದ್ರ 10ರಿಂದ 16ನೇ ಮುಖ್ಯರಸ್ತೆ, ಮೈಕೋ ಲೇಔಟ್, ಬಿಟಿಎಂ ಲೇಔಟ್, ನಾಗನಾಥಪುರ, ಸಿಕೆ ನಗರ, ಹೊಸ ರೋಡ್, ದೊಡ್ಡತೋಗೂರು, ಹೆಚ್ ಎಸ್ಆರ್ ಲೇಔಟ್, ನಾಯಕ್ ಲೇಔಟ್, ಸುರಭಿನಗರ, ಜಂಬೂಸವಾರಿ ದಿಣ್ಣೆ, ಐಡಿಬಿಐ ಲೇಔಟ್, ಸೌತ್ ಅವೆನ್ಯೂ, ಗೊಟ್ಟಿಗೆರೆ ಮುಖ್ಯರಸ್ತೆ, ಮೀನಾಕ್ಷಿ ಲೇಔಟ್ ಸೇರಿದಂತೆ ಹಲವೆಡೆ ಪವರ್ ಕಟ್ ಇರಲಿದೆ.

ಅ. 18ರಂದು ನಾಗನಾಥಪುರ, ಸಿಬಿ ಗೇಟ್, ಎಲೆಕ್ಟ್ರಾನಿಕ್ ಸಿಟಿ, ಕೋನಪ್ಪನ ಅಗ್ರಹಾರ, ದೊಡ್ಡತೋಗೂರು, ಹೆಚ್ಎಸ್ಆರ್ ಲೇಔಟ್ನಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಅ. 19ರಂದು ಆಗರ ಕೆರೆ, ಜಕ್ಕಸಂದ್ರದಲ್ಲಿ ಪವರ್ ಕಟ್ ಇರಲಿದೆ.

ಅ. 21ರಂದು ನಾಯಕ್ ಲೇಔಟ್, ಸುರಭಿನಗರ, ಜಂಬೂಸವಾರಿ ದಿಣ್ಣೆ, ಐಡಿಬಿಐ ಲೇಔಟ್, ಸೌತ್ ಅವೆನ್ಯೂ, ಗೊಟ್ಟಿಗೆರೆ ಮುಖ್ಯರಸ್ತೆ, ಕೆಂಬತಳ್ಳಿ, ಪವಮಾನಗರ, ಮೀನಾಕ್ಷಿ ಲೇಔಟ್, ಎಲೆಕ್ಟ್ರಾನಿಕ್ ಸಿಟಿ, ಕೋನಪ್ಪನ ಅಗ್ರಹಾರ, ಹೆಚ್ಎಸ್ಆರ್ ಲೇಔಟ್ ಮುಂತಾದೆಡೆ ವಿದ್ಯುತ್ ಪೂರೈಕೆ ಇರುವುದಿಲ್ಲ.

ಅ. 22ರಂದು ನಾಗನಾಥಪುರ, ಬೊಮ್ಮನಹಳ್ಳಿ, ಹೆಚ್ ಎಸ್ ಆರ್ ಲೇಔಟ್, ಕೂಡ್ಲು, ಜಕ್ಕಸಂದ್ರ, ಕೈಕೊಂಡನಹಳ್ಳಿ, ಹೊಸಪಾಳ್ಯ, ಕೋರಮಂಗಲ, ನಾರಾಯಣನಗರ 1ನೇ ಬ್ಲಾಕ್, ಹೆಚ್ ಎಂ ವರ್ಲ್ಡ್ ಸಿಟಿ, ಹೆಚ್ ಎಸ್ ಆರ್ ಲೇಔಟ್ ಮುಂತಾದೆಡೆ ಪವರ್ ಕಟ್ ಇರಲಿದೆ.

Edited By : Nirmala Aralikatti
Kshetra Samachara

Kshetra Samachara

14/10/2021 10:48 pm

Cinque Terre

832

Cinque Terre

0

ಸಂಬಂಧಿತ ಸುದ್ದಿ