ಅನೇಕಲ್: ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ವಣಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೂಡಹಳ್ಳಿ ಗ್ರಾಮದಲ್ಲಿ ಇಂದು ಸಮಗ್ರ ಜಲಾನಯನ ಅಭಿವೃದ್ಧಿ ಯೋಜನೆ ಅಣೆಕಟ್ಟುಗಳು ಮತ್ತು ಕಿರು ಜಲಾಶಯ (4 ಚೆಕ್ ಡ್ಯಾಂ, ಒಂದು ಕಿರು) ಜಲಾಶಯವನ್ನು ಬೆಂಗಳೂರು ನಗರ ಪ್ರಭಾರ ಜಿಲ್ಲಾಧಿಕಾರಿ ಸಂಗಪ್ಪ ಹಾಗೂ ಕಾಂಟಿನೆಂಟಲ್ ಸಿಇಓ ಪ್ರಶಾಂತ್ ದೊರೆಸ್ವಾಮಿ ಉದ್ಘಾಟನೆಯನ್ನು ಮಾಡಿದರು.
ಇನ್ನು ಇಲ್ಲಿನ ಚೂಡಹಳ್ಳಿ ಗ್ರಾಮದ ಮಹಿಳೆಯರು ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ಕಳಸ ಹೊತ್ತು ನೀರಿಗೆ ಕಳಸದ ನೀರನ್ನು ಸಮರ್ಪಣೆ ನೀಡಿ ಚಾಲನೆ ನೀಡಿದರು. ಕಾಂಟಿನೆಂಟಲ್ ಹಾಗೂ ಯುನೈಟೆಡ್ ವೇ ಸಹಯೋಗದಲ್ಲಿ ಕಿರು ಜಲಾಶಯ ನಿರ್ಮಾಣ ಕಾಮಗಾರಿಯನ್ನ 1ಕೋಟಿ .40ಲಕ್ಷ ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದ್ದು .3 ಕೋಟಿ ಲೀಟರ್ ನೀರು ಶೇಖರಣೆ ಸಾಮರ್ಥ್ಯದ ಹೊಂದಿದೆ .
ಇನ್ನು ಕಿರು ಜಲಾಶಯ ಉಪಯೋಗವನ್ನು ವಣಕನಹಳ್ಳಿ ಗ್ರಾಮ ಪಂಚಾಯಿತಿಯ ಸುತ್ತಮುತ್ತಲಿನ ಭಾಗದವರು ಸದುಪಯೋಗ ಪಡೆಯಲಿದ್ದಾರೆ . ಇನ್ನು ವಣಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೂಡಹಳ್ಳಿ ಗ್ರಾಮದಲ್ಲಿ ನೀರಿನ ಸಮಸ್ಯೆ ನಿಗಿಸಲು ಚೆಕ್ ಡ್ಯಾಂ ಜಲಾಶಯ ನಿರ್ಮಾಣದಿಂದ ಸುತ್ತಮುತ್ತಲಿನ ಅಂತರ್ಜಲ ಏರಿಕೆಯಾಗುವ ಸಾಧ್ಯತೆ ಇದ್ದು ಇಲ್ಲಿನ ರೈತರಿಗೆ ಹಾಗೂ ಜಾನುವಾರುಗಳಿಗೆ ಅನುಕೂಲವಾಗಲಿದೆ ಎಂದು ವನಕನಹಳ್ಳಿ ಗ್ರಾಮದ ಹಿರಿಯ ಮುಖಂಡ ದೇವರಾಜ್ ತಿಳಿಸಿದರು. ಇನ್ನು ಈ ಕಾರ್ಯಕ್ರಮದಲ್ಲಿ ಪ್ರಭಾರ ಜಿಲ್ಲಾಧಿಕಾರಿ ಸಂಗಪ್ಪ ಕಾಂಟಿನೆಂಟಲ್ ಹಾಗೂ ಯುನೈಟೆಡ್ ವೇ ನೌಕರರು ವಣಕನಹಳ್ಳಿ ಗ್ರಾಮ ಪಂಚಾಯತಿ ಸದಸ್ಯರಗಳು ಅಧ್ಯಕ್ಷರು ಭಾಗಿಯಾಗಿದ್ದರು.
Kshetra Samachara
21/07/2022 05:49 pm