ಆನೇಕಲ್:ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಸಿಡಿಹೊಸಕೋಟೆ ಸ್ಮಶಾನಕ್ಕೆ ಹೋಗುವ ದಾರಿಯಲ್ಲಿ ವಿದ್ಯುತ್ ತಂತಿ ವೈರ್ ನ್ನ ಗೋರಿಗೆ ಕಟ್ಟಲಾಗಿದೆ ಹೀಗಾಗಿ ಯಾವುದೇ ಕ್ಷಣದಲ್ಲಾದರೂ ಅಪಾಯ ಸಂಭವಿಸುವ ದೃಷ್ಟಿಯಿಂದಾಗಿ ತೆರವು ಮಾಡುವಂತೆ ಅಧಿಕಾರಿಗಳಿಗೆ ಅಲ್ಲಿನ ಸ್ಥಳೀಯರು ಆಗ್ರಹ ಮಾಡಿದ್ದಾರೆ.
ಅದರಲ್ಲೂ ಹಸು ಮತ್ತು ಮೇಕೆಗಳನ್ನು ಇದೇ ಜಾಗದಲ್ಲಿ ಮೇಯಿಸಲು ಬಿಟ್ಟು ಹೋಗ್ತಾರೆ ಒಂದುವೇಳೆ ಏನಾದರೂ ಬಾಗಿದ ಕಂಬಗಳು ಕೆಳಗೆ ಬಿದ್ದರೆ ಸಾಕಷ್ಟು ಜನಕ್ಕೆ ಅನುಕೂಲವಾಗಲಿದೆ ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ವಿದ್ಯುತ್ ಕಂಬಗಳನ್ನು ಸರಿಪಡಿಸುವಂತೆ ಒತ್ತಾಯ ಮಾಡುತ್ತಿದ್ದಾರೆ .
ಇನ್ನು ಆನೇಕಲ್ ಬೆಸ್ಕಾಂ ಅಧಿಕಾರಿಗಳ ದಿವ್ಯ ನಿರ್ಲಕ್ಷವೇ ಎದ್ದುಕಾಣುತ್ತಿದೆ. ಆನೇಕಲ್ ಮತ್ತು ಸಿಡಿಹೊಸಕೋಟೆ ಸಂಪರ್ಕ ಕಲ್ಪಿಸುವ ಸ್ಮಶಾನದಲ್ಲಿ ವಿದ್ಯುತ್ ಕಂಬಗಳು ಬಾಗಿದ್ದು ಯಾವ ಕ್ಷಣದಲ್ಲಾದರೂ ಕೂಡ ಅಪಾಯಕ್ಕೆ ಎಡೆಮಾಡಿಕೊಡುತ್ತಿದೆ. ವಿದ್ಯುತ್ ಕಂಬಗಳನ್ನು ಸರಿಪಡಿಸುವಂತೆ ಅಧಿಕಾರಿಗಳಿಗೆ ಆಗ್ರಹ ಮಾಡಿದ್ದು ಸಹ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ.. ಇನ್ನಾದರೂ ಬೆಸ್ಕಾಮ್ ಅಧಿಕಾರಿಗಳು ಎಚ್ಚೆತ್ತು ಕ್ರಮ ಕೈಗೊಳ್ಳುತ್ತಾರೆ ಅನ್ನೋದನ್ನ ಕಾದುನೋಡಬೇಕಿದೆ
Kshetra Samachara
22/07/2022 08:44 pm