ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ದಂಡಿಗಾನಹಳ್ಳಿ ಕೆರೆ 20ವರ್ಷಗಳ ನಂತರ ತುಂಬಿ ಹರಿದಿದೆ. ಕೆರೆಕೋಡಿ ಬಿದ್ದ ಪರಿಣಾಮ ಯಥೇಚ್ಛವಾಗಿ ನೀರು ಹರಿದಿದೆ. ಕೆರೆನೀರಲ್ಲಿ ಮಹಿಳೆಯರು ಮಕ್ಕಳು, ಗ್ರಾಮಸ್ಥರು ಕುಣಿದು, ಪರಸ್ಪರ ನೀರನ್ನು ಎರಚಿಕೊಂಡು ಎಂಜಾಯ್ ಮಾಡಿದ್ದಾರೆ. ದಂಡಿಗಾನಹಳ್ಳಿ ಸುತ್ತಾಮುತ್ತ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಮಳೆ ನೀರು ಪ್ರವಾಹದ ರೀತಿ ಹರಿಯುತ್ತಿದೆ. ಆದರೆ ಗ್ರಾಮಸ್ಥರ ಖುಷಿಗೇನು ಕಡಿಮೆಯಿಲ್ಲ..
ಕಳೆದ ಮೂರ್ನಾಲ್ಕು ದಿನಗಳಿಂದ ಬಿಳುತ್ತಿರುವ ಭಾರಿ ಮಳೆಗೆ ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ತಾಲೂಕಿನ ಬಹುತೇಕ ಕೆರೆಗಳು ಭರ್ತಿಯಾಗಿವೆ. ಅದರಲ್ಲೂ 20ವರ್ಷದ ನಂತರ ತಾಲೂಕಿನ ದಂಡಿಗಾನಹಳ್ಳಿ ಕೆರೆ ಭರ್ತಿಯಾಗಿದೆ. ತುಂಬಿ ಹರಿದ ಕೆರೆಯ ನೀರಲ್ಲಿ ಮಹಿಳೆಯರು ಮಕ್ಕಳು ನೀರಲ್ಲಿ ಆಟ ಆಡುತ್ತಾ ಎಂಜಾಯ್ಮೆಂಟ್ನಲ್ಲಿ ತೊಡಗಿದ್ದಾರೆ. ಕೆರೆ ತುಂಬಿ ಹರಿಯುತ್ತಿದ್ದರೆ, ಖುಷಿಯಿಂದ ಗ್ರಾಮಸ್ಥರ ಎಂಜಾಯ್ಮೆಂಟ್ ಮುಂದುವರೆದಿದೆ.
Kshetra Samachara
31/08/2022 03:40 pm