ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಜಲ ಮಂಡಳಿಯಿಂದ ನಾಳೆ ನೀರಿನ ಅದಾಲತ್

ವರದಿ: ಗಣೇಶ್ ಹೆಗಡೆ

ಬೆಂಗಳೂರು: ಬೆಂಗಳೂರು ಜಲ ಮಂಡಳಿಯಿಂದ ನಗರದ ವಿವಿಧ ಉಪ ವಿಭಾಗದಲ್ಲಿ ಗುರುವಾರ ನೀರಿನ ಅದಾಲತ್ ಜರುಗಲಿದೆ.

ಈ ಸಂದರ್ಭ ನೀರಿನ ಬಿಲ್, ನೀರು ಒಳಚರಂಡಿ ಕಲ್ಪಿಸಲು ವಿಳಂಬ, ಗೃಹ ಬಳಕೆಯಿಂದ ಗೃಹೇತರ ಬಳಕೆಯ ಪರಿವರ್ತನೆ ವಿಳಂಬ, ಕಲುಷಿತ ನೀರು ಮಿಶ್ರಣ ಕುರಿತಾದ ದೂರುಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸಬಹುದು.

ಆಗ್ನೇಯ 5-ಜೆ.ಪಿ.ನಗರ, ಜಯ ನಗರ 4th ಟಿ. ಬ್ಲಾಕ್, ಜಯ ನಗರ, ಹೊಂಬೇಗೌಡ ನಗರ, ಬೈರಸಂದ್ರ

ದಕ್ಷಿಣ ವಿಲೇಜ್ -1 ಕೂಡ್ಲು, ಬೇಗೂರು.

ಪಶ್ಚಿಮ ವಿಲೇಜ್ -1 ಹೆಮ್ಮಗೆಪುರ ಅಂಗದೀರನಹಳ್ಳಿ, ಜೆ.ಪಿ.ನಗರ 6ನೇ ಹಂತ.

ಪೂರ್ವ ವಿಲೇಜ್ -3 ಅರಳೂರು, ದೊಡ್ಡ ಕನ್ನನ ಹಳ್ಳಿ , ಕಸವನಹಳ್ಳಿ.

ನೈರುತ್ಯ -4 ಕುಮಾರಸ್ವಾಮಿ ಲೇಔಟ್, ಇಸ್ರೋ ಲೇಔಟ್ , ಪೂರ್ಣಪ್ರಜ್ಞಾ ಲೇ ಔಟ್.

ಪೂರ್ವ ವಿಲೇಜ್ -1 ಹೊರಮಾವು ರಾಜಾ ಕೆನೆಲ್.

ವಾಯುವ್ಯ -5 ಪೀಣ್ಯ ದಾಸರಹಳ್ಳಿ, ಪೀಣ್ಯ, ಅಂದ್ರಹಳ್ಳಿ.

ಉತ್ತರ -1 ಸಹಕಾರ ನಗರ, ಜಕ್ಕೂರು, ಮನೋರಾಯನ ಪಾಳ್ಯ, ಕೆಂಪಾಪುರ.

ಈಶಾನ್ಯ -3 ಆರ್. ಟಿ. ನಗರ, ಕಾವಲ್ ಬೈರಸಂದ್ರ, ಸಂಜಯ್ ನಗರ, ಬಿಇಎಲ್ ರಸ್ತೆ, ಆನಂದ ನಗರ.

ಬೆಳಗ್ಗೆ 9.30 ರಿಂದ 11 ಗಂಟೆವರೆಗೆ ಮೇಲಿನ ಏರಿಯಾಗಳಲ್ಲಿ ನೀರಿನ ಅದಾಲತ್ ನಡೆಯಲಿದೆ.

Edited By : Vijay Kumar
Kshetra Samachara

Kshetra Samachara

24/11/2021 10:26 am

Cinque Terre

266

Cinque Terre

0

ಸಂಬಂಧಿತ ಸುದ್ದಿ