ತುಮಕೂರು: ಗಣೇಶೋತ್ಸವದ ವೇಳೆ ಡಿಜೆ ಶಬ್ದಕ್ಕೆ ವ್ಯಕ್ತಿಯೊಬ್ಬ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ತುಮಕೂರು ತಾಲ್ಲೂಕು ಹೆಬ್ಬಾಕ ಗ್ರಾಮದಲ್ಲಿ ಶನಿವಾರ ರಾತ್ರಿ ಗಣೇಶೋತ್ಸವದ ಅಂಗವಾಗಿ ಡಿಜೆ ಆಯೋಜಿಸಲಾಗಿತ್ತು. ಡಿಜೆ ಸೌಂಡಿಗೆ ಸ್ಟೆಪ್ ಹಾಕುತ್ತಿದ್ದ ಅದೇ ಗ್ರಾಮದ ವಿರೂಪಾಕ್ಷ (48) ಎಂಬಾತ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂಬ ಬಗ್ಗೆ ಗ್ರಾಮದಲ್ಲಿ ಬಿಸಿ ಬಿಸಿ ಚರ್ಚೆ ಆರಂಭವಾಗಿದೆ.
ಡಿಜೆ ಆರಂಭವಾದ ತಕ್ಷಣ ಕೆಲ ಗ್ರಾಮಸ್ತರು ವಿರೋಧ ವ್ಯಕ್ತಪಡಿಸಿದ್ದಾರೆ. ಬೆಳ್ಳಾವಿ ಠಾಣೆ ಪೊಲೀಸರಿಗೆ ಡಿಜೆ ಸ್ತಗಿತಗೊಳಿಸುವಂತೆ ಮನವಿ ಮಾಡಿದರೂ ಸಹ ಪೊಲೀಸರು ಗ್ರಾಮಸ್ತರ ಮನವಿಗೆ ಕಿವಿಗೊಟ್ಟಿಲ್ಲ. ಪೊಲೀಸರ ವರ್ತನೆಯಿಂದ ರೋಸಿ ಹೋದ ಗ್ರಾಮಸ್ತರು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿದ ಬಳಿಕ ಡಿಜೆಗೆ ಕಡಿವಾಣ ಬಿದ್ದಿದೆ. ಸ್ಥಳದಲ್ಲಿ ಬಂದೋಬಸ್ತ್ ಗಾಗಿ ನಿಯೋಜಿತವಾಗಿದ್ದ ಪೊಲೀಸರೂ ಸಹ ಡಿಜೆ ಸ್ಥಗಿತಗೊಳಿಸಲು ಸಾಧ್ಯವಾಗದೆ ಅಸಹಾಯಕರಾಗಿದ್ದರು.
ಗ್ರಾಮಸ್ತರು ಡಿಜೆ ಸ್ತಗಿತಗೊಳಿಸುವಂತೆ ಪೊಲೀಸರಿಗೆ ಪರಿಪರಿಯಾಗಿ ಮನವಿ ಮಾಡುತ್ತಿದ್ದ ಆಡಿಯೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಗ್ರಾಮದಲ್ಲಿ ಡಿಜೆ ನಡೆಸಲು ಪೊಲೀಸ್ ಇಲಾ ಖೆ ಅನುಮತಿಯನ್ನು ನಿರಾಕರಿಸಿತ್ತು ಎಂಬ ಬಗ್ಗೆ ಮಾಹಿತಿ ಹರಿದಾಡುತ್ತಿವೆ. ಪೊಲೀಸರ ಅನುಮತಿಯನ್ನು ಮೀರಿ ಡಿಜೆ ನಡೆಸಿರುವುದರ ಹಿಂದೆ ಗ್ರಾಮದ ಹಾಗೂ ಜಿಲ್ಲೆಯ ಪ್ರಭಾವಿ ಬಿಜೆಪಿ ಮುಖಂಡರೊಬ್ಬರ ಕೈವಾಡವಿದೆ ಎಂಬ ಆರೋಪಗಳೂ ಸಹ ಕೇಳಿ ಬರುತ್ತಿವೆ. ಘಟನೆ ತರುವಾಯ ಅದೇ ಬಿಜೆಪಿ ಮುಖಂಡರು ಪ್ರಕರಣ ಮುಚ್ಚಿಹಾಕಲು ಗ್ರಾಮದಲ್ಲಿ ರಾಜಿಸಂದಾನ ನಡೆಸುತ್ತಿದ್ದಾರೆ ಎಂಬ ಮಾಹಿತಿಯೂ ಸಾರಗವಜನಿಕ ವಲಯದಲ್ಲಿ ಹರಿದಾಡುತ್ತಿದೆ.
PublicNext
18/09/2022 06:02 pm