ಆನೇಕಲ್ :ಪ್ರತಿನಿತ್ಯ ಯಾಂತ್ರಿಕ ಯುಗದಲ್ಲಿ ಕ್ರೀಡೆಗಳನ್ನು ಮರೆತಿದ್ದೇವೆ. ಇದು ಮೊಬೈಲ್ ಯುಗ ಇಂತಹ ಒಂದು ಯುಗದಲ್ಲಿ ಸಹ ಯುವಕರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವನೆಯನ್ನು ದೈಹಿಕವಾಗಿ ಮತ್ತು ಆರೋಗ್ಯವಾಗಿ ಬೆಳೆಸುತ್ತಿರೋದು ಕ್ರೀಡೆ ಮಾತ್ರ ಎಂದು ಬಹುಜನ ಸಮಾಜವಾದಿ ಪಾರ್ಟಿಯ ಆನೇಕಲ್ ಆಧ್ಯಕ್ಷ ಡಾಕ್ಟರ್ ಚಿನ್ನಪ್ಪ ಅಭಿಪ್ರಾಯಪಟ್ಟರು
ಆನೇಕಲ್ ಪಟ್ಟಣದ ಎಎಸ್ ಬಿ ಆಟದ ಮೈದಾನದಲ್ಲಿ ಇಂದು ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ಆಯೋಜನೆ ಮಾಡಲಾಗಿತ್ತು. ಇನ್ನು ಸ್ಪರ್ಧೆಯಲ್ಲಿ ಭಾಗಿಯಾಗುವ ಮಕ್ಕಳು ಸ್ಪರ್ಧೆ ಮನೋಭಾವದಿಂದ ಭಾಗಿಯಾಗಲಿ ಎಂದು ತಿಳಿಸಿದರು . ಇನ್ನು ನೆನ್ನೆ ಕಬ್ಬಡಿ ಪಂದ್ಯಾವಳಿಗಳು ಜಿಲ್ಲಾಮಟ್ಟದಲ್ಲಿ ನಡೆದಿದ್ದು ಇಂದು ಕೋಕೋ ಪಂದ್ಯಾವಳಿಗಳು ಜಿಲ್ಲಾ ಮಟ್ಟದಲ್ಲಿ ನಡೆಯುತ್ತಿದೆ . 362 ಜನ ಕ್ರೀಡಾಪಟುಗಳು ಸಹ ಇಂದು ಸಹ ಭಾಗಿಯಾಗಿದ್ದರು.. ಇನ್ನು ಈ ಕ್ರೀಡಾಕೂಟದಲ್ಲಿ ಅಧಿಕಾರಿ ವರ್ಗದವರು ಸಹ 120ಕ್ಕೂ ಹೆಚ್ಚು ಜನರು ಭಾಗಿಯಾಗಿದ್ದಾರೆ.
Kshetra Samachara
14/09/2022 09:46 pm