ಯಶವಂತಪುರ: ಚಿತ್ರಕೂಟ ಶಾ ಲೆಯ ಆವರಣದಲ್ಲಿ ಚಿತ್ರಕೂಟ ಶಾಲೆಯ 16 ಮಕ್ಕಳು ಯೂತ್ ಗೇಮ್ಸ್ ಕೌನ್ಸಿಲ್ ,ಯೂತ್ ಇಂಡೋ-ನೇಪಾಲ್ ಅಂತರಾಷ್ಟ್ರೀಯ ಕ್ರೀಡಾಕೂಟದಲ್ಲಿ 9ಚಿನ್ನ ಮತ್ತು 7ಬೆಳ್ಳಿ ಪದಕ ಪ್ರಶಸ್ತಿ ಗೆದ್ದ ಕ್ರೀಡಾಪಟುಗಳಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಿದ್ದರು. ಚಿತ್ರಕೂಟ ಶಾಲೆಯ ವ್ಯವಸ್ಥಾಪಕರಾದ ಚೈತನ್ಯರವರು ಪ್ರಾಂಶುಪಾಲರಾದ ಶ್ರೀಮತಿ ಜೋಯಿತ ಚಟರ್ಜಿರವರು ಮತ್ತು ದೈಹಿಕ ಶಿಕ್ಷಕರಾದ ರಂಗನಾಥ್,ಕುಮಾರಿ ಸಂಗೀತಾ ರವರು ಪದಕ ವಿಜೇತ ಮಕ್ಕಳಿಗೆ ಸನ್ಮಾನ ಮಾಡಿದರು.
ಅಂತರಾಷ್ಟ್ರೀಯ ಯುವ ಕ್ರೀಡಾಕೂಟದಲ್ಲಿ ಚಿತ್ರಕೂಟ ಶಾಲಾ ಮಕ್ಕಳು ಯೂತ್ ಗೇಮ್ಸ್ ಕೌನ್ಸಿಲ್ ನ ಎರಡನೇ ಯೂತ್ ಗೇಮ್ಸ್ ಇಂಡೋ ನೇಪಾಲ್ ಅಂತರಾಷ್ಟ್ರೀಯ ಸರಣಿಯು 2022ರ ಆಗಸ್ಟ್ 27 ರಿಂದ 29 ರವರೆಗೆ ನೇಪಾಳದ ಪೋಖ್ರದ ದಶರಥ್ ರಂಗಶಾಲಾ ಸ್ಟೇಡಿಯಂನಲ್ಲಿ ನಡೆಯಿತು. ಕರ್ನಾಟಕ, ಆಂಧ್ರ ಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನದ ತಂಡಗಳು ಹಾಗೂ ನೇಪಾಳದ ಮೂರು ವಿವಿಧ ರಾಜ್ಯಗಳ ಕ್ರೀಡಾಪಟುಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದವು.
Kshetra Samachara
02/09/2022 06:24 pm