ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಏಕೈಕ ಪದಕ ವಿಜೇತ ಕನ್ನಡಿಗ ಗುರುರಾಜ ಸರ್ಕಾರದ ವಿರುದ್ಧ ಬೇಸರ

ದೊಡ್ಡಬಳ್ಳಾಪುರ: 2022ರ ಕಾಮನ್ ವೆಲ್ತ್ ಗೇಮ್ಸ್‌ನ ಏಕೈಕ ಪದಕ ವಿಜೇತ ಕನ್ನಡಿಗ ಗುರುರಾಜ ಪುಜಾರಿಗೆ ಪ್ರೋತ್ಸಾಹ ಧನ ನೀಡುವಲ್ಲಿ ರಾಜ್ಯ ಸರ್ಕಾರಕ್ಕೆ ನಿರಾಸಕ್ತಿ ಇದೆ ಎಂದು ಗುರುರಾಜ ಪೂಜಾರಿ ಬೇಸರ ವ್ಯಕ್ತಪಡಿಸಿದರು.

ಬರ್ಮಿಂಗ್ ಹ್ಯಾಮ್‌ನಲ್ಲಿ ನಡೆದ 2022ರ ಕಾಮನ್ ವೆಲ್ತ್ ಗೇಮ್ಸ್‌ನಲ್ಲಿ ಪದಕ ಗೆದ್ದ ಏಕೈಕ ಕನ್ನಡಿಗ ಗೌರವಕ್ಕೆ ಗುರುರಾಜ ಪೂಜಾರಿ ಪಾತ್ರರಾಗಿದ್ದಾರೆ. 61 ಕೆಜಿ ವಿಭಾಗದ ವೇಟ್ ಲಿಫ್ಟಿಂಗ್ ನಲ್ಲಿ ಕಂಚಿನ ಪದಕವನ್ನು ಪಡೆದಿರುವ ಗುರುರಾಜ ಪುಜಾರಿಯನ್ನ ದೊಡ್ಡಬಳ್ಳಾಪುರದ ಕ್ರೀಡಾಭಿಮಾನಿಗಳು ಇಂದು ನಗರದ ಪ್ರವಾಸಿ ಮಂದಿರದಲ್ಲಿ ಸನ್ಮಾನಿಸಿದರು.

ಇದೇ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಆಟಗಾರ ಇಲ್ಲಿಯವರಿಗೂ 61 ಕೆಜಿ ವಿಭಾಗದಲ್ಲಿ ಭಾರತಕ್ಕೆ ಯಾರು ಪದಕ ತಂದಿರಲಿಲ್ಲ, ನಾನು 61 ಕೆಜಿ ವಿಭಾಗದಲ್ಲಿ ಭಾರತಕ್ಕೆ ಮೊದಲ ಪದಕ ತಂದ ಖುಷಿ ನನಗಿದೆ. ಚಿನ್ನ ಅಥವಾ ಬೆಳ್ಳಿ ಗೆಲ್ಲುವ ನಿರೀಕ್ಷೆ ಇತ್ತು ಆದರೆ ಬರ್ಮಿಂಗ್ ಹ್ಯಾಮ್ ನಲ್ಲಿ ತರಬೇತಿಯಲ್ಲಿದ್ದಾಗ ಆರೋಗ್ಯ ಹದಗೆಟ್ಟ ಪರಿಣಾಮ ಕಂಚಿನ ಪದಕಕ್ಕೆ ಮಾತ್ರ ತೃಪ್ತಿ ಪಡಬೇಕಿದೆ.

ಕೇಂದ್ರ ಸರ್ಕಾರದಿಂದ ಎಲ್ಲಾ ರೀತಿಯ ಸಹಕಾರ ಸೌಲಭ್ಯ ಸಿಕ್ಕಿದೆ, ಆದರೆ ರಾಜ್ಯ ಸರ್ಕಾರ ನೀಡುತ್ತಿರುವ ಪ್ರೋತ್ಸಾಹ ಧನ ತುಂಬ ಕಡಿಮೆ ಇದೆ. ಬೇರೆ ರಾಜ್ಯದಲ್ಲಿ ಕಂಚಿನ ಪದಕ ವಿಜೇತರಿಗೆ 40 ರಿಂದ 50 ಲಕ್ಷ ಪ್ರೋತ್ಸಾಹ ಧನ ಅನೌನ್ಸ್ ಮಾಡಿದ್ದಾರೆ, ಕರ್ನಾಟಕ ಸರ್ಕಾರದಿಂದ ಇಲ್ಲಿಯವರೆಗೂ ಪ್ರೋತ್ಸಾಹ ಧನ ಅನೌನ್ಸ್ ಮಾಡಿಲ್ಲ. 2018 ರಲ್ಲಿ ಪದಕ ಗೆದ್ದಾಗ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ 25 ಲಕ್ಷ ಅನೌನ್ಸ್ ಮಾಡಿತ್ಥು ಈಗಿನ ಬಿಜೆಪಿ ಸರ್ಕಾರ 8ಲಕ್ಷ ಕೂಡುವುದ್ದಾಗಿ ಹೇಳಿದೆ, ಈ ಕುರಿತು ಸಿಎಂ ಜೊತೆ ಮಾತನಾಡುವೆ, ಹೆಚ್ಚಿನ ಪ್ರಮಾಣದಲ್ಲಿ ಪ್ರೋತ್ಸಾಹ ಧನ ನೀಡಿ, ನನ್ನಂತೆ ಕ್ರಿಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುವರು ಮತ್ತು ದೇಶದ ಕೀರ್ತಿಯನ್ನ ಹೆಚ್ಚಿಸುವರು ಎಂದರು.

Edited By : Nagesh Gaonkar
PublicNext

PublicNext

14/08/2022 09:44 pm

Cinque Terre

35.47 K

Cinque Terre

4

ಸಂಬಂಧಿತ ಸುದ್ದಿ