ನೆಲಮಂಗಲ: ನೆಲಮಂಗಲ ತಾಲೂಕಿನ ಅರೆಬೊಮ್ಮನಹಳ್ಳಿ ಗ್ರಾಮದ ಕ್ರೀಡಾಂಗಣದಲ್ಲಿ ಹಳ್ಳಿ ಕ್ರಿಕೆಟ್ ಕಲರವ, ಅರೆಬೊಮ್ಮನಹಳ್ಳಿ ಪಂಚಾಯಿತಿ ಪ್ರೀಮಿಯರ್ ಲೀಗ್‌ನ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಮತ್ತು ಆಟಗಾರರಿಗೆ ಬಹುಮಾನ ವಿತರಿಸಲಾಯಿತು.
ಇನ್ನು ಕ್ರಿಕೆಟ್ ಪಂದ್ಯಾವಳಿಗೆ ಆಗಮಿಸಿದ್ದ ಕಾಂಗ್ರೆಸ್ ವೀಕ್ಷಕ ಎಂ. ಶ್ರೀನಿವಾಸ್ ಮಾತನಾಡಿ, ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಅವಕಾಶ ದೊರೆತಾಗ ನಾವೆಲ್ಲರೂ ಸಹಕಾರ ನೀಡುತ್ತೇವೆ. ಯುವಕರಲ್ಲಿ ಕ್ರೀಡಾ ಮನೋಭಾವ ಬೆಳೆಯಲು ಹೋಬಳಿಗೊಂದು ಕ್ರೀಡಾಂಗಣ ನಿರ್ಮಿಸುವ ಅವಶ್ಯಕತೆ ಇದೆ ಎಂದರು.
ಫೈನಲ್ ಪಂದ್ಯದಲ್ಲಿ ರಾಯಲ್ ಫೈಟರ್ಸ್ ತಾಳೇಕೆರೆ ಜಯದ ನಗೆ ಬೀರಿದ್ದು, ಬ್ಯಾಡರಹಳ್ಳಿ ಹನುಮಾನ್ ಫೈಟರ್ಸ್ ರನ್ನರ್ಪ್ ಪ್ರಶಸ್ತಿ ಪಡೆದಿದೆ. ವಿಜೇತ ತಂಡಕ್ಕೆ ವಿಶೇಷ ಬಹುಮಾನ ಮತ್ತು 50 ಸಾವಿರ ನಗದು ನೀಡಲಾಯಿತು. ಅಲ್ಲದೆ ಸರಣಿ ಶ್ರೇಷ್ಠ, ಉತ್ತಮ ಬ್ಯಾಟರ್ ಮತ್ತು ಉತ್ತಮ ಬೌಲರ್‌ಗಳಿಗೂ ಸಹ ವಿಶೇಷ ಬಹುಮಾನ ವಿತರಿಸಿದರು. ಅತಿಥೇಯ ತಂಡ ಅರೆಬೊಮ್ಮನಹಳ್ಳಿ ಮೂರನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.
ಈ ಸಂದರ್ಭದಲ್ಲಿ ಬೂದಿಹಾಳ್ ಗ್ರಾ.ಪಂ ಮಾಜಿ ಅಧ್ಯಕ್ಷ ನಾಗರಾಜು, ವಿಎಸ್ಸೆಸ್ಸೆನ್ ಸದಸ್ಯ ಲಕ್ಕಸಂದ್ರ ಗಂಗರಾಜು, ಮಾಜಿ ಅಧ್ಯಕ್ಷ ಹೊನ್ನ ರಾಯನಹಳ್ಳಿ ಮಂಜುನಾಥ್, ಗ್ರಾಮ ಪಂಚಾಯಿತಿ ಸದಸ್ಯ ಬ್ಯಾಡ್ರಳ್ಳಿ ಅರುಣ್ ಕುಮಾರ್, ರಂಗಸ್ವಾಮಿ ಉಪಸ್ಥಿತರಿದ್ದರು..
PublicNext
18/07/2022 06:10 pm