ಬೆಂಗಳೂರು: ಮಳೆಯಿಂದಾಗಿ ಭಾನುವಾರ ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಟಿ20 ಪಂದ್ಯ ರದ್ದಾಗಿದೆ. ಈ ಹಿನ್ನೆಲೆಯಲ್ಲಿ ಟಿಕೆಟ್ ಹಣದ ಶೇಕಡ 50 ರಷ್ಟು ಮೊತ್ತವನ್ನು ವಾಪಸ್ ಮಾಡುವುದಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
5 ಪಂದ್ಯಗಳ ಸರಣಿಯ ಕೊನೆಯ ಪಂದ್ಯ ನಿನ್ನೆ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ನಡೆದಿತ್ತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 3.3 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 28 ರನ್ ಗಳಿಸಿತ್ತು. ಈ ಹಂತದಲ್ಲಿ ಮಳೆ ಸುರಿಯಿತು. ಮಳೆ ನಿಲ್ಲದ ಕಾರಣದಿಂದ ಅಂತಿಮವಾಗಿ ರದ್ದುಗೊಳಿಸಲಾಯಿತು ಎಂದು ಹೇಳಿದೆ.
ಮಳೆಯಿಂದಾಗಿ ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯ ರದ್ದಾಗಿತ್ತು. ಪಂದ್ಯದಲ್ಲಿ ಕೇವಲ 3.3 ಓವರ್ ಗಳ ಆಟ ಮಾತ್ರ ಆಡಲಾಗಿತ್ತು. ನಿಯಮಾವಳಿಗಳ ಪ್ರಕಾರ ಕೇವಲ ಒಂದೇ ಒಂದು ಬಾಲ್ ಎಸೆದಿದ್ದರೂ ಟಿಕೆಟ್ ಹಣ ರೀಫಂಡ್ ಮಾಡುವುದಿಲ್ಲ. ಆದರೆ ಅಭಿಮಾನಿಗಳಿಗಾಗಿ ಈ ಬಾರಿ ಟಿಕೆಟ್ ಹಣದ 50% ರಷ್ಟನ್ನು ರೀಫಂಡ್ ಮಾಡಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಖಜಾಂಚಿ ವಿನಯ್ ಮೃತ್ಯುಂಜಯ ಹೇಳಿದ್ದಾರೆ.
ಒರಿಜಿನಲ್ ಟಿಕೆಟ್ ನೀಡಿ ಹಣ ಪಡೆಯಿರಿ:
ರೀಫಂಡ್ ನ ದಿನಾಂಕ ಮತ್ತು ಸ್ಥಳವನ್ನು ಶೀಘ್ರದಲ್ಲೇ ತಿಳಿಸಲಾಗುವುದು. ಹಣ ನೀಡಿ ಖರೀದಿಸಿರುವ ಒರಿಜಿನಲ್ ಟಿಕೆಟ್ ಗಳನ್ನು ಪ್ರೇಕ್ಷಕರು ರೀಫಂಡ್ ವೇಳೆ ನೀಡಬೇಕಾಗುತ್ತದೆ ಎಂದು ವಿನಯ್ ಮೃತ್ಯುಂಜಯ ತಿಳಿಸಿದ್ದಾರೆ.
PublicNext
20/06/2022 08:13 pm