ಬೆಂಗಳೂರು: ಗೆಲವು ಸಾಧಕನ ಸ್ವತ್ತು. ಗೆಲ್ಲುವ ಛಲವಿದ್ದರೆ ಯಾರಿಂದಲೂ ತಡೆಯಲಾಗದು. ಯಲಹಂಕದ ಬಾಗಲೂರಿನ 4ಜನ ಕ್ರೀಡಾಪಟುಗಳು ನೇಪಾಳದಲ್ಲಿ ನಡೆದ ಇಂಡೋನೇಪಾಳ್ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 4ಚಿನ್ನ ಒಂದು ಬೆಳ್ಳಿ ಪದಕ ಗೆದ್ದು ರಾಜ್ಯ ದೇಶಕ್ಕೆ ಕೀರ್ತಿ ತಂದಿದ್ದಾರೆ. ಈ ಮೂಲಕ ಸೆಪ್ಟೆಂಬರ್ 2022ರಲ್ಲಿ ಥಾಯ್ಲೆಂಡ್ ನಡೆಯುವ ಏಷ್ಯನ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ರಾಜ್ಯದಿಂದ, ದೇಶವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿದ್ದಕ್ಕೆ ಚಿನ್ನದ ಪದಕ ವಿಜೇತರು ಮತ್ತು ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.
ಬಾಗಲೂರಿನ ಸುಮನ್ ಚಿರಾಯು ಅಥ್ಲೆಟಿಕ್ಸ್ ಸ್ಪೋರ್ಟ್ಸ್ ಅಕಾಡೆಮಿಯ 40ಕ್ಕು ಹೆಚ್ಚು ಕ್ರೀಡಾಪಟುಗಳು ರಾಜ್ಯ, ದೇಶ ವಿದೇಶಗಳಲ್ಲಿ ಚಿನ್ನ, ಬೆಳ್ಳಿ ಪದಕ ಬೇಟೆಯಾಡ್ತಿದ್ದಾರೆ. ಕಳೆದ ಏಪ್ರಿಲ್‌ನಲ್ಲಿ ದೆಹಲಿಯ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಪದಕ ಗೆದ್ದ ಭರತ್, ಮಹದೇವ್ ಪೂಜಾರಿ, ಸುಬ್ರಾಮ್ ಗೌಡ ಮತ್ತು ಸೌರಭ್ ನೇಪಾಳದ ಇಂಡೋನೇಪಾಳ ಇಂಟರ್ನ್ಯಾಷನಲ್ ಅಥ್ಲೆಟಿಕ್ಸ್ ನಲ್ಲಿ ಭಾಗವಹಿಸಲು ಅವಕಾಶ ಪಡೆದರು. ಸೀನಿಯರ್ ವಿಭಾಗದಲ್ಲಿ ಭರತ್ 1500 ಮೀ ಓಟದಲ್ಲಿ ಚಿನ್ನ, ಟ್ರಿಪಲ್ ಜಂಪ್ ನಲ್ಲಿ ಬೆಳ್ಳಿ ಪಡೆದರೆ, ಮಹದೇವ್ ಪೂಜಾರಿ 800. ಮೀ. ಓಟದಲ್ಲಿ ಚಿನ್ನ ಪಡೆದಿದ್ದಾರೆ. ಇನ್ನು 14ವರ್ಷದ ಬಾಲಕರ ಶಾಟ್ ಪುಟ್‌ನಲ್ಲಿ ಸೌರಭ್ ಚಿನ್ನ ಪಡೆದರೆ, 12ವರ್ಷ ವಯೋಮಿತಿ ಶಾಟ್ ಪುಟ್‌ನಲ್ಲಿ ಸುಬ್ರಾಮ್ ಗೌಡ ಚಿನ್ನ ಗೆದ್ದಿದ್ದಾರೆ. ಈ ಮೂಲಕ ನೇರವಾಗಿ 2022ರ ಅಕ್ಟೋಬರ್‌ನ ಥಾಯ್ಲೆಂಡ್ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ದೇಶವನ್ನು ಪ್ರತಿನಿಧಿಸುವ ಅವಕಾಶ ಪಡೆದಿದ್ದಾರೆ. ಇದರ ಬಗ್ಗೆ ಬಾಗಲೂರು ಜನ & ಪೋಷಕರು ಖುಷಿಯಾಗಿದ್ದಾರೆ.
ಒಂದು ವರ್ಷದ ಅವದಿಲಿ ಸುಮನ್ ಚಿರಾಯು ಸ್ಪೋರ್ಟ್ಸ್ ಅಕಾಡೆಮಿ ಮಕ್ಕಳು ಹೀಗೆ ರಾಜ್ಯ ದೇಶ ವಿದೇಶಗಳ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಗೆದ್ದು ಭಾರತದ ರಾಷ್ಟ್ರದ್ವಜವನ್ನು ಎತ್ತರೆತ್ತರಕ್ಕೆ ಹಾರಿಸಿದ್ದಾರೆ. ಬೆಮಗಳೂರಿನ ಯಲಹಂಕದ ಬಾಗಲೂರಿನ ಗ್ರಾಮೀಣ ಮಕ್ಕಳು ಏಷ್ಯನ್ ಗೇಮ್ಸ್ಗೆ ಸೆಲೆಕ್ಟ್ ಆಗಿದ್ದಕ್ಕೆ ಕ್ರೀಡಾ ಸಚಿವ ನಾರಾಯಣಗೌಡ ಕ್ರೀಡಾಪಟುಗಳನ್ನು ವಿಧಾನಸೌಧಕ್ಕೆ ಕರೆದು ಸನ್ಮಾನಿಸಿದ್ದಾರೆ. ಇನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ಭೇಟಿಗೆ ಅವಕಾಶ ನೀಡಿದ್ದಾರೆ. ಮಕ್ಕಳು ಬರುವ ಏಷ್ಯನ್ ಗೇಮ್ಸ್ ನಲ್ಲಿ ಚಿನ್ನದ ಬೇಟೆಯಾಡಲಿ ಎಂಬುದು ಪಬ್ಲಿಕ್ ನೆಕ್ಟ್‌ನ ಆಶಯ.
Kshetra Samachara
01/06/2022 01:43 pm