ವರದಿ: ಬಲರಾಮ್ ವಿ.
ಬೆಂಗಳೂರು: ಉತ್ತಮ ಕರ್ನಾಟಕ ಬಾಡಿ ಬಿಲ್ಡರ್ ಮತ್ತು ಫಿಟ್ ನೆಸ್ ಅಸೋಸಿಯೇಶನ್ ವತಿಯಿಂದ ಹೂಡಿಯಲ್ಲಿ
ʼಮಿಸ್ಟರ್ & ಮಿಸೆಸ್ ಸ್ಟಾರ್ಟ್ ಚಾಂಪಿಯನ್ ಶಿಪ್- 2022ʼ ಮಿಸ್ಟರ್ ಸೌತ್ ಇಂಡಿಯಾ- 2022 ಹಾಗೂ ʼಮಿಸ್ಟರ್ ಮಹದೇವಪುರ- 2022ʼ ಸ್ಪರ್ಧೆಯನ್ನು ಶಾಸಕ ಅರವಿಂದ ಲಿಂಬಾವಳಿ ಉದ್ಘಾಟಿಸಿದರು.
ನಂತರ ಮಾತನಾಡಿದ ಶಾಸಕರು, ಕ್ಷೇತ್ರದಲ್ಲಿ ಕ್ರೀಡಾಪಟುಗಳಿಗೆ ಉತ್ತೇಜನ ನೀಡಲು ಗಂಜೂರಿನಲ್ಲಿ ವಾಜಪೇಯಿ ಕ್ರೀಡಾಂಗಣ, ದೊಡ್ಡ ಕನ್ನಲಿಯಲ್ಲಿ ವೇಮನ ಕ್ರೀಡಾಂಗಣ, ಮಂಡೂರಿನಲ್ಲಿ ಅಂತಾರಾಷ್ಟ್ರೀಯ ಕ್ರೀಡಾಂಗಣ ಆರಂಭಿಸಲಾಗುವುದು ಎಂದರು.
ಮಿಸ್ಟರ್ & ಮಿಸೆಸ್ ಸ್ಟಾರ್ಟ್ ಚಾಂಪಿಯನ್ ಶಿಪ್ ನ ಮಿ.ಮಹದೇವಪುರ ಸ್ವರ್ಧೆಯಲ್ಲಿ ಹಲವಾರು ಸ್ಪರ್ಧಿಗಳು ದೇಹದಾರ್ಢ್ಯ ಪ್ರದರ್ಶನ ತೋರಿದರು. ಕಟ್ಟಕಡೆಗೆ "ಮಿಸ್ಟರ್ ಮಹದೇವಪುರ- 2022" ಪ್ರಶಸ್ತಿಯನ್ನು ಕಾರ್ತಿಕ್ ಗೆದ್ದುಕೊಂಡರು.
ಸ್ಪರ್ಧಾ ವಿಜೇತರಿಗೆ ಶಾಸಕ ಅರವಿಂದ ಲಿಂಬಾವಳಿ ಪ್ರಶಸ್ತಿ ವಿತರಿಸಿ, ಗೌರವಿಸಿದರು.
PublicNext
08/05/2022 08:08 pm