ಬೆಂಗಳೂರು: ಕೆ.ಆರ್. ಪುರಂನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಇಂದು ಯುವರತ್ನ ಪುನೀತ್ ರಾಜ್ ಕುಮಾರ್ ಅವರ ಸ್ಮರಣಾರ್ಥ 'ಪುನೀತ್ ರಾಜ್ ಕುಮಾರ್ ಮೆಮೋರಿಯಲ್ ಕ್ರಿಕೆಟ್ ಕಪ್' ಪಂದ್ಯಾವಳಿ ಜರುಗಿತು.
ಅರುಣ್ ಯಾದವ್ ಹಾಗೂ ಕಿರಣ್ ನೇತೃತ್ವದಲ್ಲಿ ಪಂದ್ಯಾವಳಿ ಆಯೋಜಿಸಲಾಗಿದ್ದು, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಅವರು ಪುನೀತ್ ಅವರ ಭಾವಚಿತ್ರದ ಮುಂದೆ ದೀಪ ಬೆಳಗಿಸಿ, ಪುಷ್ಪಾರ್ಚನೆ ಮಾಡಿ ಚಾಲನೆ ನೀಡಿದರು.
ನಂತರ ಸಚಿವರೇ ಬ್ಯಾಟಿಂಗ್ ಮಾಡಿ, ಪಂದ್ಯಾವಳಿಗೆ ಶುಭ ಹಾರೈಸಿದರು.
ಪಂದ್ಯಾವಳಿಯಲ್ಲಿ ಪ್ರಶಸ್ತಿ ಗೆದ್ದ ತಂಡಕ್ಕೆ ಬಹುಮಾನವಾಗಿ 60 ಸಾವಿರ ರೂ. ಹಾಗೂ ರನ್ನರ್ ಅಪ್ ತಂಡಕ್ಕೆ 30 ಸಾವಿರ ನಗದು ಬಹುಮಾನವಿತ್ತು.
Kshetra Samachara
28/11/2021 08:23 pm