ಬೆಂಗಳೂರು:ನಗರದಲ್ಲಿ ಪಟಾಕಿ ಸದ್ದು ಜೋರ್ ಆಗುತ್ತಿದೆ. ಐಪಿಲ್ ಪಂದ್ಯ ಹಿನ್ನೆಲೆಯಲ್ಲಿ ಪಟಾಕಿ ಸಿಡಿಸುವವರ ಸಂಖ್ಯೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಮಾಜಿ ಸಚಿವ ಸುರೇಶ್ ಕುಮಾರ್,ಪಶ್ಚಿಮ ವಿಭಾಗದ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ಬೆಂಗಳೂರಿನಲ್ಲಿ ಪ್ರತಿ ದಿನ ರಾತ್ರಿ ಹತ್ತು ಗಂಟೆ ನಂತರ ಪಟಾಕಿ ಸದ್ದು ಹೆಚ್ಚಾಗುತ್ತಿದೆ. ಐಪಿಲ್ ಗೆಲುವು,ಹುಟ್ಟುಹಬ್ಬ ನೆಪದಲ್ಲಿ ನಗರದಲ್ಲಿ ಪಟಾಕಿ ಸಿಡಿಸುತ್ತಿದ್ದಾರೆ ಎಂದು ಮಾಜಿ ಸಚಿವ ಸುರೇಶ್ ಕುಮಾರ್ ದೂರಿನಲ್ಲಿ ತಿಳಿಸಿದ್ದಾರೆ.
ಪಟಾಕಿ ಸಿಡಿಸಿವುದರಿಂದ ಎಳೆ ಮಕ್ಕಳು, ವೃದ್ಧರು ಮತ್ತು ಪಶು-ಪಕ್ಷಿಗಳಿಗೂ ಪಟಾಕಿ ಶಬ್ಧ ಆಘಾತ ಉಂಟು ಮಾಡುತ್ತದ ಎಂದು ಸುರೇಶ್ ಕುಮಾರ್ ಹೇಳಿದ್ದು, ಪಟಾಕಿ ಸಿಡಿಸುವವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಅಂತಲೇ ಪತ್ರದ ಮೂಲಕ ಒತ್ತಾಯಿಸಿದ್ದಾರೆ.
PublicNext
23/05/2022 05:56 pm