ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ವಿದ್ಯಾರ್ಥಿಗಳು ಹಳೆಯ ಪಾಸ್‌ಗಳನ್ನ ಬಳಸಲು ಅನುಮತಿ ಕೊಟ್ಟ KSRTC

ಬೆಂಗಳೂರು: ಕಳೆದ ಸಾಲಿನಲ್ಲಿ ಪಡೆದಿರುವ ಪಾಸ್‌ಗಳು ಮಾನ್ಯತಾ ಅವಧಿ ಜೂನ್ 30 ರವರೆಗೆ ಇರುವುದರಿಂದ, ವಿದ್ಯಾರ್ಥಿಗಳು ಯಾವುದೇ ಗೊಂದಲಕ್ಕೆ ಒಳಗಾಗದೇ ತಮ್ಮ ಹಳೆಯ ಪಾಸುಗಳನ್ನು ಬಳಸಿಕೊಳ್ಳುವಂತೆ ಸಾರಿಗೆ ಇಲಾಖೆ ಸೂಚಿಸಿದೆ.

ರಾಜ್ಯದಲ್ಲಿ ಶಾಲಾ ಹಾಗೂ ಕಾಲೇಜುಗಳು ಮೇ 16 ರಿಂದ ಪುನಾರಂಭವಾಗಲಿವೆ ಎಂದು ರಾಜ್ಯ ಸರಕಾರ ಘೋಷಿಸಿದೆ. ಮಕ್ಕಳು ಶಾಲೆಗೆ ಹೋಗಲು ತಯಾರಿ ಕೂಡ ಮಾಡಿಕೊಂಡಿದ್ದಾರೆ. ಆದರೆ, ಬಸ್​ ಪಾಸಿನ ಬಗ್ಗೆ ಮಕ್ಕಳು ಹಾಗೂ ಪೋಷಕರಲ್ಲಿ ಗೊಂದಲ ಏರ್ಪಟ್ಟಿತ್ತು. ಹಳೆ ಬಸ್​ ಪಾಸ್ ಗಳು ಜೂನ್ ವರೆಗೂ ಇದ್ದು ಜೂನ್​ವರೆಗೂ ಸ್ಕೂಲ್​, ಕಾಲೇಜ್​ ಪಾಸ್​ಗಳನ್ನು ಬಸ್​ಗಳಲ್ಲಿ ಸ್ವೀಕರಿಸುತ್ತಾರಾ ಎಂಬ ಪ್ರಶ್ನೆ ಕೂಡ ಮೂಡಿತ್ತು.

ಇದೀಗ KSRTC ತನ್ನ ಪ್ರಕಟಣೆ ಮೂಲಕ ವಿದ್ಯಾರ್ಥಿಗಳು ಹಾಗೂ ಪೋಷಕರ (Parents) ಗೊಂದಲಕ್ಕೆ ತೆರೆ ಎಳೆದಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಬಸ್‌ ಪಾಸ್‌ ಮಾನ್ಯತೆ ಬಗ್ಗೆ ವಿದ್ಯಾರ್ಥಿಗಳಿಗೆ ವಿಶೇಷ ಸೂಚನೆ ನೀಡಿದೆ. ಹೊಸ ಪಾಸ್ ಗಳನ್ನ ತೆಗೆದುಕೊಳ್ಳುವಾಗ ಶಾಲೆಗೆ ಕಟ್ಟಿದ ಶುಲ್ಕದ ರಶೀದಿಯನ್ನ ತೆಗೆದುಕೊಂಡು ಕಡ್ಡಾಯವಾಗಿ ಸಲ್ಲಿಸಬೇಕು ಅಂತಲೂ ತಿಳಿಸಿದೆ.

Edited By : PublicNext Desk
Kshetra Samachara

Kshetra Samachara

15/05/2022 11:50 am

Cinque Terre

1.31 K

Cinque Terre

0

ಸಂಬಂಧಿತ ಸುದ್ದಿ