ಬೆಂಗಳೂರು : ಕುಡಿಯುವ ನೀರು ಯಾರಿಗೆ ಬೇಡ ಹೇಳಿ ಅದರಲ್ಲೂ ಸಕಲ ಜೀವಗಳಿಗೆ ಕುಡಿಯುವ ನೀರು ಬೇಕೇ ಬೇಕು. ಆದರೆ ಅದೆಷ್ಟೋ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ಬರ ಉಂಟಾಗಿದೆ ಮತ್ತು ನೀರು ಇದ್ದರೂ ಅದು ಕುಡಿಯಲು ಸೂಕ್ತ ಇಲ್ಲವಾಗಿದೆ.
ಸದ್ಯ ಇದಕ್ಕೆಲ್ಲ ಕಡಿವಾಣ ಹಾಕುವ ಮಿಷಿನ್ ಒಂದು ನಗರಕ್ಕೆ ಎಂಟ್ರಿ ಕೊಟ್ಟಿದೆ. ಹೌದು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಈ ಮೊಬೈಲ್ ವ್ಯಾನ್ ವಾಟರ್ ಪ್ಯೂರಿಫೈಯರ್ ಬೊಮ್ಮನ ಹಳ್ಳಿಯ ರಸ್ತೆಗಳಲ್ಲಿ ಓಡಾಡುತ್ತಿದೆ. ಈ ವಿಶೇಷ ವಾಟರ್ ಪ್ಯೂರಿಫೈಯರ್ ವ್ಯಾನ್ ನಿಮಿಷಗಳಲ್ಲಿ ಯಾವುದೇ ನೀರನ್ನು ಕೂಡ ಕುಡಿಯುವ ನೀರಾಗಿ ತಯಾರಿಸಬಹುದು.
ಇದಕ್ಕೆ ಉದಾಹರಣೆ ಇಲ್ಲಿದೆ ನೋಡಿ ರಾಜಕಾಲುವೆಯಲ್ಲಿ ಹರಿಯುವ ನೀರನ್ನು ಈ ವಾಟರ್ ಪ್ಯೂರಿಫೈಯರ್ ವ್ಯಾನ್ ನಿಮಿಷಗಳಲ್ಲಿ ಕುಡಿಯುವ ನೀರಾಗಿಸಿ ಕೊಡುತ್ತಿದೆ. ಈ ವಾಟರ್ ಪ್ಯೂರಿಫೈಯರ್ ವ್ಯಾನ್ ದೂರದ ಇಸ್ರೇಲ್ ನಿಂದ ನಗರಕ್ಕೆ ತಂದ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಮಾತನಾಡಿದ್ದು ಹೀಗೆ.
ಈ ವಾಹನ ಒಂದು ಬಾರಿಗೆ ಹತ್ತರಿಂದ ಹದಿನೈದು ಸಾವಿರ ಲೀಟರ್ ಕುಡಿಯುವ ನೀರು ಕೊಡುವ ಸಾಮರ್ಥ್ಯ ಹೊಂದಿದೆ. ಮತ್ತು ಈ ವಾಹನ ಯಾವುದೇ ಪ್ರದೇಶಗಳಲ್ಲಿ ಕೂಡ ಓಡಾಡುವ ಸಾಮರ್ಥ್ಯ ಹೊಂದಿದೆ. ಈ ವಾಹನಕ್ಕೆ ಒಂದು ಕೋಟಿ ರೂಪಾಯಿ ನೀಡಿ ನಗರಕ್ಕೆ ತರಲಾಗಿದೆ ಇದರಿಂದ ಜನರಿಗೆ ಕುಡಿಯುವ ನೀರು ನಿಮಿಷಗಳಲ್ಲೇ ದೊರೆಯುತ್ತದೆ.
ಇನ್ನು ಬರೀ ಬೊಮ್ಮನಹಳ್ಳಿ ಕ್ಷೇತ್ರಕ್ಕೆ ಸೀಮಿತವಲ್ಲದೆ ಕರ್ನಾಟಕದಲ್ಲಿ ಕುಡಿಯುವ ನೀರಿಗೆ ಬರ ಇರುವ ಊರುಗಳಿಗೆ ಈ ಮೊಬೈಲ್ ವಾಟರ್ ಪ್ಯೂರಿಫೈಯರ್ ವಾಹನವನ್ನು ನೀಡುವ ಬಗ್ಗೆ ಸಿಎಂ ಜೊತೆ ಮಾತನಾಡುತ್ತೇನೆ ಎಂದು ಸತೀಶ್ ರೆಡ್ಡಿ ಹೇಳಿದರು.
ಒಟ್ಟಿನಲ್ಲಿ ಕುಡಿಯುವ ನೀರು ಬರ ಇರುವ ಪ್ರದೇಶಗಳಿಗೆ ಈ ವಾಹನ ಲಭ್ಯವಾದರೆ ಜನರಿಗೆ ಕುಡಿಯುವ ನೀರಿನ ಬರದಿಂದ ಮುಕ್ತಿ ಸಿಗುತ್ತದೆ.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
10/08/2022 08:53 am