ಬೆಂಗಳೂರು : ಇಷ್ಟು ದಿನಗಳ ಕಾಲ ಚಿಲ್ಲರೆಗಾಗಿ ಪರದಾಡುತ್ತಿದ್ದ ಕಂಡಕ್ಟರ್ ಗಳಿಗೆ, ಪ್ರಯಾಣಿಕರಿಗೆ ಇದು ಸಂತಸದ ಸುದ್ದಿ.
ಸದ್ಯ ಎಲ್ಲಿ ನೋಡಿದ್ರು ಗೂಗಲ್ ಪೇ,ಫೋನ್ ಪೇ, ಟಾಯ್ಲೆಟ್ ಇಂದ ಹಿಡಿದು, ತಳ್ಳುವಗಾಡಿಯಲ್ಲಿ ವ್ಯಾಪಾರಿ ಮಾಡುವವರು ಈಗ ಡಿಜಿಟಲ್ ದುನಿಯಾಗೆ ಒಗ್ಗಿದ್ದಾರೆ.
ಇನ್ಮುಂದೆ ಬಿಎಂಟಿಸಿ ಬಸ್ ಗಳಲ್ಲಿಯೂ ಕೂಡ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಟಿಕೆಟ್, ದಿನದ ಪಾಸ್, ತಿಂಗಳ ಪಾಸ್ ಖರೀದಿ ಮಾಡಬಹುದು.
ಈಗ್ಲ ಬಿಎಂಟಿಸಿ ಆ್ಯಪ್ ಡೌನ್ ಲೋಡ್ ಮಾಡಿಕೊಂಡು ಪಾಸ್ ಖರೀದಿ ಮಾಡಬಹುದು. ಇದ್ರಿಂದ ಬಸ್ ಕಂಡಕ್ಟರ್ ಗಳಿಗೂ ಕೆಲಸ ಕಮ್ಮಿಯಾಗುತ್ತದೆ. ಪ್ರಯಾಣಿಕರು ಸಹ ಚಿಲ್ಲರೆ ಕಿರಿಕಿರಿಯಿಂದ ತಪ್ಪಿಸಿಕೊಳ್ಳಬಹುದು. ಮತ್ತು ಕೈಯಲ್ಲಿ ದುಡ್ಡು ಇರದಿದ್ದರು ಬಸ್ ಪ್ರಯಾಣ ಮಾಡಬಹುದು.
- ರಂಜಿತಾಸುನಿಲ್.
PublicNext
02/06/2022 08:44 pm