ದೊಡ್ಡಬಳ್ಳಾಪುರ: ಜನಸ್ಪಂದನ ಕಾರ್ಯಕ್ರಮ ಪದೇ ಪದೇ ಮುಂದೂಡಿಕೆಯಾಗುತ್ತಿತ್ತು, ಸತತ ಮೂರನೇ ಬಾರಿಗೆ ಜನಸ್ಪಂದನ ಕಾರ್ಯಕ್ರಮ ಮುಂದೂಡಿಕೆ ಮಾಡಲಾಗಿತ್ತು ನಾಳೆ ಜನಸ್ಪಂದನ ಕಾರ್ಯಕ್ರಮ ನಡೆಯಲಿದ್ದು, ಯಾವುದೇ ವಿಘ್ನಗಳಿಲ್ಲದೆ ಕಾರ್ಯಕ್ರಮ ಸುಸೂತ್ರವಾಗಿ
ದೊಡ್ಡಬಳ್ಳಾಪುರದ ತಮ್ಮಶೆಟ್ಟಿಹಳ್ಳಿ ಬಳಿ ಜನಸ್ಪಂದನ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು, ಬಿಜೆಪಿ ರಾಜ್ಯ ಸರ್ಕಾರದ ಮೂರು ವರ್ಷ ಮತ್ತು ಬಸವರಾಜ್ ಬೊಮ್ಮಾಯಿಯವರ ಒಂದು ವರ್ಷದ ಸರ್ಕಾರದ ಸಾಧನೆಗಾಗಿ ಜನಸ್ಪಂದನ ಕಾರ್ಯಕ್ರಮ ಅಯೋಜನೆ ಮಾಡಲಾಗಿದೆ, ಜುಲೈ 28 ರಂದು ನಡೆಯ ಬೇಕಿದ್ದ ಜನೋತ್ಸವ ಕಾರ್ಯಕ್ರಮ ಪ್ರವೀಣ್ ನೆಟ್ಟಾರು ಹತ್ಯೆಯಿಂದು ಮುಂದೂಡಿಕೆಯಾಗಿತ್ತು, ಆಗಸ್ಟ್ 28 ರಂದು ಗಣೇಶೋತ್ಸವ ಹಿನ್ನೆಲೆ ಮತ್ತೆ ಮುಂದೂಡಲಾಗಿತ್ತು, ಮೂರನೇ ಬಾರಿ ಸೆಪ್ಟೆಂಬರ್ 8 ರಂದು ಕಾರ್ಯಕ್ರಮ ಅಯೋಜನೆ ಮಾಡಲಾಗಿತ್ತು, ಸಚಿವ ಉಮೇಶ್ ಕತ್ತಿ ನಿಧನ ಹಿನ್ನೆಲೆ ಮತ್ತೆ ಕಾರ್ಯಕ್ರಮ ಮುಂದೂಡಿಕೆ ಮಾಡಲಾಗಿತ್ತು.
ಪದೇ ಪದೇ ಕಾರ್ಯಕ್ರಮ ಮುಂದೂಡಿಕೆಯಾಗುತ್ತಿದದ್ದು ಸರ್ಕಾರಕ್ಕೆ ಮುಜುಗರ ತಂದಿತ್ತು. ಕಾರ್ಯಕ್ರಮ ಯಾವುದೇ ಅಡೆತಡೆ ಇಲ್ಲದೇ ಸುಸೂತ್ರವಾಗಿ ನಡೆಯಲಿ ಎಂದು ಪ್ರಾರ್ಥಿಸಿ ಕಾರ್ಯಕ್ರಮದ ಮುಖ್ಯ ವೇದಿಕೆಯಲ್ಲಿ ಗಣ ಹೋಮ ಹಾಗೂ ವಿಷ್ಣು ಹೋಮ ಮಾಡಲಾಯಿತು.
ಹತ್ತು ಮಂದಿ ಆಗಮಿಕರ ನೇತೃತ್ವದಲ್ಲಿ ಹೋಮ ಹವನ ಜರುಗಿತು. ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್, ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಬಿ.ಸಿ ನಾರಾಯಣಸ್ವಾಮಿ ಹಾಗೂ ಪಕ್ಷದ ಮುಖಂಡರು ಹೋಮದಲ್ಲಿ ಪಾಲ್ಗೊಂಡರು.
Kshetra Samachara
09/09/2022 02:58 pm