ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಎದೆಗೆ ಕತ್ತಿಯಿಂದ ಚುಚ್ಚಿ ರಕ್ತದ ಕೋಡಿ ಹರಿಸುವಿಕೆ!; ಇದು ಪಶ್ಚಾತ್ತಾಪದ "ಹರಕೆ"

ದೊಡ್ಡಬಳ್ಳಾಪುರ: ತ್ಯಾಗ- ಬಲಿದಾನದ ಸಂದೇಶ ಸಾರುವ ಹಸೇನ್ ಹುಸೇನ್ ಆಚರಣೆ ದೊಡ್ಡಬಳ್ಳಾಪುರ ನಗರದಲ್ಲಿನಡೆಯಿತು. ಪಶ್ಚಾತ್ತಾಪಕ್ಕಾಗಿ ಶಿಯಾ ಮುಸ್ಲಿಮರು ಬ್ಲೆಡ್, ಕತ್ತಿಯಿಂದ ಎದೆ ಚುಚ್ಚಿಕೊಳ್ಳುವ ಮೂಲಕ ದೇವರಿಗೆ ಹರಕೆ ತೀರಿಸಿದರು.

ದೊಡ್ಡಬಳ್ಳಾಪುರ ನಗರದ ಕಿಲ್ಲಾ ಮಸೀದಿಯಲ್ಲಿ ಅಂಜುಮಾನ್ ಎ ಹೈದರಿಯ ಸಂಘಟನೆ ಮತ್ತು ಹಸೇನ್ ಹುಸೇನ್ ಸಂಘಟನೆ ಸಹಭಾಗಿತ್ವದಲ್ಲಿ ಮೊಹರಂ ಶೋಕಾಚರಣೆ ಮಾಡಲಾಯಿತು. ಮೊಹರಂ ನಂತರ 7ನೇ ದಿನಕ್ಕೆ ಈ ಆಚರಣೆ ನಡೆಸಲಾಗುತ್ತದೆ. ಮೊಹರಂ ಶೋಕಾಚರಣೆಯಲ್ಲಿ ಪಾಲ್ಗೊಳಲು ದೇಶದ ವಿವಿಧ ರಾಜ್ಯ ಮತ್ತು ಹೊರದೇಶಗಳಿಂದಲೂ ಶಿಯಾ ಮುಸ್ಲಿಮರು ದೊಡ್ಡಬಳ್ಳಾಪುರಕ್ಕೆ ಬರುತ್ತಾರೆ. ಎದೆಗೆ ಬ್ಲೆಡ್ ಮತ್ತು ಕತ್ತಿಯಿಂದ ಚುಚ್ಚಿಸಿಕೊಳ್ಳುವ ಮೂಲಕ ರಕ್ತವನ್ನು ಹರಿಸಿ ದೇವರಿಗೆ ತಮ್ಮ ಹರಕೆ ತೀರಿಸುತ್ತಾರೆ.

ಹಸೇನ್ ಹುಸೇನ್ ಆಚರಣೆಗೆ 1400 ವರ್ಷಗಳ ಇತಿಹಾಸವಿದೆ. ಮಹಮ್ಮದ್ ಪೈಗಂಬರ್ ಅವರ ಮೊಮ್ಮಗ ಇಮಾಮ್ ಹುಸೇನ್ ಧರ್ಮಕ್ಕಾಗಿ ತ್ಯಾಗ- ಬಲಿದಾನ ನಡೆಸಿದರು. ಯುದ್ಧದಲ್ಲಿ ಧರ್ಮದ ಪರವಾಗಿ ನಿಂತ ಇಮಾಮ್ ಹುಸೇನ್ ಸೇರಿದಂತೆ ಅವರ ಅನುಯಾಯಿಗಳನ್ನು ಕೊಲ್ಲಲಾಯಿತು.

ಕೊಂದ ಪಶ್ಚಾತ್ತಾಪದ ಫಲವಾಗಿ ಬ್ಲೆಡ್ ಮತ್ತು ಕತ್ತಿಯಿಂದ ಎದೆ ಬಡಿದು ಕೊಳ್ಳುತ್ತಾರೆ. ತಮ್ಮ ದೇಹದಿಂದ ರಕ್ತ ಸುರಿಸುವ ಮೂಲಕ ಅಂದು ನಡೆದ ಅಧರ್ಮದ ಕೆಲಸಕ್ಕೆ ಇಂದು ಶಿಯಾ ಮುಸ್ಲಿಮರು ಪಶ್ಚಾತ್ತಾಪ ಪಡುತ್ತಾರೆ! ದೊಡ್ಡಬಳ್ಳಾಪುರ ನಗರದಲ್ಲಿ 265 ವರ್ಷಗಳಿಂದಲೂ ಈ ಆಚರಣೆ ನಡೆಸಿಕೊಂಡು ಬರಲಾಗುತ್ತಿದೆ.

Edited By : Nagesh Gaonkar
PublicNext

PublicNext

17/08/2022 03:40 pm

Cinque Terre

21.57 K

Cinque Terre

1

ಸಂಬಂಧಿತ ಸುದ್ದಿ