ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಘಾಟಿ ಸುಬ್ರಮಣ್ಯ ದೇವಾಲಯದಲ್ಲಿ ತ್ರಿವರ್ಣ ವಿದ್ಯುತ್ ದೀಪಾಲಂಕಾರ

ದೊಡ್ಡಬಳ್ಳಾಪುರ: 75ನೇ ವರ್ಷದ ಸ್ವಾತಂತ್ರ್ಯೋತ್ಸವ ಆಚರಣೆ ಹಿನ್ನಲೆ ದೇಶದೆಲ್ಲೆಡೆ ರಾಷ್ಟ್ರ ಧ್ವಜ ಹಾರಾಡುತ್ತಿವೆ. ಶಾಲೆ, ಕಚೇರಿ, ಮನೆ-ಮಠ, ದೇವಸ್ಥಾನ ಮಸೀದಿಗಳ ಮೇಲೂ ತಿರಂಗಾವನ್ನು ಕಾಣಬಹುದಾಗಿದೆ. ಹಾಗೆಯೇ ಘಾಟಿ ಸುಬ್ರಮಣ್ಯ ದೇವಸ್ಥಾನದಲ್ಲಿ ತ್ರಿವರ್ಣ ವಿದ್ಯುತ್ ದೀಪಾಲಂಕಾರ ನೋಡುಗರ ಗಮನ ಸೆಳೆಯುತ್ತಿದೆ.

ದೊಡ್ಡಬಳ್ಳಾಪುರ ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಘಾಟಿ ಸುಬ್ರಮಣ್ಯ, ಸರ್ಪದೋಷ ನಿವಾರಣೆಗಾಗಿ ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ. ಶ್ರದ್ಧೆ ಭಕ್ತಿಯಿಂದ ದೇವರ ದರ್ಶನ ಪಡೆದು ದೋಷಗಳಿಂದ ವಿಮುಕ್ತರಾಗುತ್ತೆವೆಂಬ ನಂಬಿಕೆ. ಭಕ್ತರಿಗೆ, ದೇಶದೆಲ್ಲೆಡೆ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆಯ ಅಮೃತಮಹೋತ್ಸವ ಹಿನ್ನಲೆ ಸದಾ ದೇವರ ಭಕ್ತಿಯನ್ನ ಕಾಣಬಹುದ್ದಾಗಿದೆ. ಘಾಟಿ ಕ್ಷೇತ್ರದಲ್ಲಿ ದೇಶಭಕ್ತಿ ಸಹ ಎದ್ದು ಕಾಣುತ್ತಿದೆ.

ದೇವಸ್ಥಾನದ ಪ್ರವೇಶ ದ್ವಾರದಲ್ಲಿರುವ ವಿಮಾನ ಗೋಪುರಕ್ಕೆ ತ್ರಿವರ್ಣ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಕತ್ತಲಲ್ಲಿ ಕೇಸರಿ, ಬಿಳಿ, ಹಸಿರು ಬಣ್ಣಗಳ ವಿದ್ಯುತ್ ದೀಪಾಲಂಕಾರದಿಂದ ಜಗಮಗಿಸುತ್ತಿರುವ ಗೋಪುರ ನೋಡುಗರ ಗಮನ ಸೆಳೆಯುತ್ತಿದೆ.

Edited By : Manjunath H D
PublicNext

PublicNext

13/08/2022 08:20 am

Cinque Terre

24.49 K

Cinque Terre

0

ಸಂಬಂಧಿತ ಸುದ್ದಿ