ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಹರಿಯುತ್ತಿರುವ ಕೆರೆ ಕೋಡಿ ನೀರಲ್ಲಿ ಮೀನು ಹಿಡಿಯಲು ಪೈಪೋಟಿ

ದೇವನಹಳ್ಳಿ: ಇಂದು ವರಮಹಾಲಕ್ಷ್ಮೀ ಹಬ್ಬದ ದಿನ. ಮಹಿಳೆಯರು ದೇವರು ಪೂಜೆ ಕಾರ್ಯಗಳಲ್ಲಿ ನಿರತಾಗಿದ್ದಾರೆ. ಆದ್ರೆ ಪುರುಷರು ಮತ್ತು ಯುವಕರು ಕೆರೆಕೋಡಿ ನೀರಲ್ಲಿ ಮೀನು ಹಿಡಿಯುವ ಹುಚ್ಚಾಟಕ್ಕೆ ಇಳಿದಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಬೂದಿಗೆರೆ ಕೆರೆ ಕಳೆದ 30ವರ್ಷಗಳ ನಂತರ ಕೋಡಿ ಬಿದ್ದಿದೆ. ಕಳೆದ ಮೂರು ದಿನಗಳಿಂದ ‌ಬಿಟ್ಟು ಬಿಡದೆ ಮಳೆ ಆಗ್ತಿರುವ ಹಿನ್ನಲೆಯಲ್ಲಿ ಕೆರೆಕೋಡಿಯಲ್ಲಿ ಮೀನುಗಳು ಹರಿದುಕೊಂಡು ಹೋಗುತ್ತಿವೆ. ಹೀಗೆ ನೀರಲ್ಲಿ ಹರಿದು ಹೋಗ್ತಿರುವ ಮೀನುಗಳನ್ನು ಹಿಡಿಯಲು ಜನ ನಾ ಮುಂದು ತಾ ಮುಂದು ಎನ್ನುತ್ತಾ, ಬಲೆ ಬೀಸಿ , ಪೈಪೋಟಿಗೆ ಇಳಿದು ಹಿಡಿಯುತ್ತಿದ್ದಾರೆ. ಆಕಸ್ಮಾತ್ ಆಯತಪ್ಪಿ ಬಿದ್ದರೆ ಪ್ರಾಣಕ್ಕೆ ತೊಂದರೆ. ಆದರೆ ಗ್ರಾಮದ ಯುವಕರಾಗಲಿ, ಪುರುಷರಾಗಲಿ ಇತ್ತ ತಲೆ ಕೆಡಿಸಿಕೊಳ್ಳದೇ ಮೀನು ಹಿಡಿಯುವುದರಲ್ಲೆ ಮಗ್ನರಾಗಿದ್ದಾರೆ.

ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ದೇವನಹಳ್ಳಿ..

Edited By :
Kshetra Samachara

Kshetra Samachara

05/08/2022 01:43 pm

Cinque Terre

2.08 K

Cinque Terre

0

ಸಂಬಂಧಿತ ಸುದ್ದಿ