ಬೆಂಗಳೂರು: ಜೀವಿಗಳಿಗೆ ಬೇಕು ಮಳೆ, ಮಳೆಯಿಂದ ಬೆಳೆ. ಬೆಳೆಯಿಂದ ಜೀವನ. ಹೀಗೆ ಮನುಷ್ಯನ ಬದುಕಿಗೆ ಜೀವಜಲ ಅತ್ಯಾವಶ್ಯಕ. ಹೌದು... ಜೀವಜಲ ದಾತೆ ಗಂಗಾಮಾತೆಗೆ ಯಲಹಂಕದಲ್ಲಿ ನಡೆದ ವಾರ್ಷಿಕೋತ್ಸವದ ಕುಂಭಾಭಿಷೇಕ ಕಣ್ಮನ ಸೆಳೆಯಿತು.
ಜೀವ ಸಂಕುಲಕ್ಕಾಗಿ ಭಗೀರಥ ಮಹರ್ಷಿ ಗಂಗಾಮಾತೆನ ಭೂಮಿಗೆ ಕರೆತಂದರು ಅಂತ ಪುರಾಣ ಹೇಳುತ್ತೆ. ಹಾಗೆಯೇ, ಯಲಹಂಕದಲ್ಲಿ ನಾರಿಯರು ಯಲಹಂಕ ಕೆರೆ ಕೋಡಿಯಿಂದ ಕಳಶಗಳಲ್ಲಿ ನೀರು ತಂದು ಗಂಗಾದೇವಿಗೆ ಕುಂಭಾಭಿಷೇಕ ನೆರವೇರಿಸಿದರು. ಗ್ರಾಮದೇವತೆ ಗಂಗಾಮಾತೆಗೆ ವಾಡಿಕೆಯಂತೆ ಗ್ರೀಷ್ಮ ಋತು ದಶಮಿ ದಿನ ವಿಶೇಷ ಪೂಜಾ ಕಾರ್ಯ ನೆರವೇರಿತು.
ಆಧುನೀಕತೆ ಹಾಗೂ ನಗರೀಕರಣದ ಹಾವಳಿಗೆ ಸಿಲುಕಿ ಗ್ರಾಮಾಂತರದ ಹಬ್ಬ- ಹರಿದಿನ, ಜಾತ್ರೆ ಮಹೋತ್ಸವ ತಮ್ಮತನ ಕಳೆದುಕೊಳ್ತಿವೆ ಎನ್ನಲಾಗ್ತಿದೆ. ಆದರೆ, ಯಲಹಂಕದಲ್ಲಿ ಇಂದು ನಡೆದ ಗಂಗಮ್ಮ ದೇವರ ವಾರ್ಷಿಕೋತ್ಸವದ ತಮಟೆ, ನಾದಸ್ವರ, ವಿಶೇಷ ಪೂಜೆ, ಕಳಶೋತ್ಸವ, ಪ್ರಸಾದ ವಿನಿಯೋಗ ಹಬ್ಬದ ವಾತಾವರಣಕ್ಕೆ ಸಾಕ್ಷಿಯಾಗಿತ್ತು.
ಗಂಗಾ ಮಾತೆಗೆ ಯಲಹಂಕದಲ್ಲಿ ಭಕ್ತ ಸಮೂಹ ವಿಶೇಷವಾಗಿ ಪೂಜೆ ನೆರೆವೇರಿಸಿತು. ಇಷ್ಟಾರ್ಥ ಸಿದ್ದಿಗೆ, ಸಂತಾನ ಪ್ರಾಪ್ತಿಗೆ ಯಲಹಂಕ ಗ್ರಾಮದೇವತೆ ಗಂಗಾ ಮಾತೆ ತುಂಬಾನೇ ಫೇಮಸ್.
- SureshBabu Public Next ಯಲಹಂಕ
PublicNext
09/06/2022 10:54 pm