ಬೆಂಗಳೂರು: ಅಖಿಲ ಭಾರತೀಯ ಹಿಂದೂ ರಾಷ್ಟ್ರದ ಅಧಿವೇಶನ ಜೂನ್ 12 ರಿಂದ 18 ರವರೆಗೆ ಗೋವಾದಲ್ಲಿ ಜರುಗಲಿದೆ. ಭಾರತದ 26 ರಾಜ್ಯಗಳಿಂದ, ಅನೇಕ ದೇಶಗಳ ಸಾವಿರಕ್ಕೂ ಹೆಚ್ಚು ನೇತಾರರು ಅಂದು ಭಾಗಿಯಾಗಲಿದ್ದಾರೆ ಎಂದು ಹಿಂದೂ ಜನಜಾಗೃತಿ ಸಮಿತಿ ವಕ್ತಾರ ಮೋಹನ್ ಗೌಡ ತಿಳಿಸಿದ್ದಾರೆ.
ಬೆಂಗಳೂರಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಈ ಅಧಿವೇಶನದಲ್ಲಿ ಜ್ಞಾನ ವಾಪಿ ಮಸೀದಿ ವಿಚಾರ, ಮಥುರಾ ಮುಕ್ತಿ ಆಂದೋಲನಾ, ಕಾಶ್ಮೀರ ಹಿಂದೂಗಳ ನರಮೇಧ, ಮಸೀದಿಗಳ ಧ್ವನಿವರ್ಧಕ ವಿವಾದ, ಹಿಜಾಬ್,ಹಲಾಲ್, ಲವ್ ಜಿಹಾದ್ ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದರು.
PublicNext
07/06/2022 07:22 pm