ವರದಿ: ಬಲರಾಮ್ ವಿ.
ಬೆಂಗಳೂರು: ಪುರಾಣ ಪ್ರಸಿದ್ಧ ಶ್ರೀ ದ್ರೌಪತಾಂಬ ದೇವಿ ಹೂವಿನ ಕರಗ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.
71ನೇ ವರ್ಷದ ಈ ಕರಗ ಮಹೋತ್ಸವ ಹೊಸಕೋಟೆ ತಾಲೂಕಿನ ತಾವರೆಕೆರೆ ಗ್ರಾಮದಲ್ಲಿ 3 ವರ್ಷಗಳ ನಂತರ ಸಂಭ್ರಮದಿಂದ ನೆರವೇರಿತು. 23 ಪಲ್ಲಕ್ಕಿಗಳ ಉತ್ಸವ ಸೇರಿದಂತೆ ವಿವಿಧ ಕಲಾ ತಂಡಗಳು ಭಕ್ತಾದಿಗಳ ಕಣ್ಮನ ತಣಿಸಿದವು.
ಶ್ರೀ ಪಟಾಲಮ್ಮ ಮತ್ತು ಶ್ರೀ ಮುತ್ಯಾಲಮ್ಮ ದೇವಿ ದೇವಾಲಯದಲ್ಲಿ ಮೊನ್ನೆ ರಾತ್ರಿ 11.40ರ ಸಮಯಕ್ಕೆ ಪ್ರಾರಂಭವಾದ ಕರಗ ಮಹೋತ್ಸವ ಗ್ರಾಮದಲ್ಲೆಡೆ ಸಂಚರಿಸಿ ಮಾರನೇ ದಿನ ಬೆಳಗ್ಗೆ 11.30ರ ಸುಮಾರಿಗೆ ದೇವಾಲಯ ಪ್ರವೇಶಿಸಿತು.
ಮೊದಲ ಬಾರಿಗೆ ಕರಗ ಹೊತ್ತ ಕರಗದ ಪೂಜಾರಿ ಮುನಿರಾಜು ತಮ್ಮ ಕರ್ತವ್ಯವನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಿದರು.
ʼತಾವರೆಕೆರೆ ಕರಗ ಮಹೋತ್ಸವʼ ಹೊಸಕೋಟೆ ತಾಲೂಕಿನಲ್ಲಿ ಬಲು ಪ್ರಸಿದ್ಧಿ ಪಡೆದಿದೆ.
Kshetra Samachara
02/05/2022 11:11 am