ಆನೇಕಲ್: ಶಾಂತಿ, ಪ್ರೀತಿ, ಬಾಂಧವ್ಯ, ಭ್ರಾತೃತ್ವ ಬರಬೇಕಾದರೆ ಅದು ಭಗವಾನ್ ಬುದ್ಧನಿಂದ ಮಾತ್ರ ಸಾಧ್ಯ. ಈಗಿನ ಯುವ ಪೀಳಿಗೆ ದಾರಿ ತಪ್ಪುತ್ತಿದೆ. ಹೀಗಾಗಿ ಬುದ್ಧನ ಸಿದ್ಧಾಂತ ಕಡೆ ಯುವಕರು ಮುಖ ಮಾಡಬೇಕು ಎಂದು ದಲಿತ ಪರ ಸಂಘಟನೆ ಒಕ್ಕೂಟದ ಅಧ್ಯಕ್ಷ ರಾವಣ ತಿಳಿಸಿದ್ದಾರೆ.
ಆನೇಕಲ್ ತಾಲೂಕಿನ ರಾಮ ಕುಟೀರದಲ್ಲಿ ಭಗವಾನ್ ಬುದ್ಧರ ಜೀವನ ಚರಿತ್ರೆ ನಾಟಕವನ್ನು ಪ್ರದರ್ಶನ ಮಾಡಲಾಗುತ್ತಿದೆ ಎಂದು ಪಬ್ಲಿಕ್ ನೆಕ್ಸ್ಟ್ ಮೂಲಕ ತಿಳಿಸಿದರು. ಇನ್ನು ಭಗವಾನ್ ಬುದ್ಧರ ನಾಟಕಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರೋತ್ಸಾಹ ಮಾಡಬೇಕು ಎಂದು ಮನವಿ ಮಾಡಿಕೊಂಡರು.
PublicNext
30/04/2022 10:11 am