ಊರಿನ ಅಂದ್ರೆ ಸಾಕು ಇಡೀ ಊರಿನ ಜನರು ಸಂಭ್ರಮದಲ್ಲಿ ನಿರತರಾಗಿರುತ್ತಾರೆ. ಈ ಬಾರಿಯೂ ಕೂಡ ಎನ್.ಎಸ್ ಪಾಳ್ಯದ ಜಾತ್ರೆ ಅದ್ದೂರಿಯಾಗಿ ನಡೆಯಿತು. ನಸುಕಿನ ಜಾವ ದಿಂದ ಶುರುವಾಗಿ ಮಧ್ಯಾಹ್ನದವರೆಗೂ ಸಂಭ್ರಮದಲ್ಲಿ ಜನರು ನಿರತರಾಗಿದ್ದರು.
ಬಿಟಿಎಂ ಲೇಔಟ್‌ನ ರಸ್ತೆ ರಸ್ತೆಗಳಲ್ಲೂ ಜನಸ್ತೋಮ ರಸ್ತೆಗಳಲ್ಲಿ ಹಬ್ಬದ ಸಂಭ್ರಮ ಕಂಡುಬಂತು. ಬಿಟಿಎಂ ಲೇಔಟ್‌ನ 12 ದಿಕ್ಕುಗಳಿಂದ ಬಂದ ಪಲ್ಲಕ್ಕಿಗಳಿಂದ ಜಾತ್ರೆ ಇನ್ನೂ ಅದ್ದೂರಿಯಾಗಿ ನೆರವೇರಿತು. ಮಧ್ಯರಾತ್ರಿ ಶುರುವಾದ ಪಲ್ಲಕ್ಕಿಯ ಮೆರವಣಿಗೆ ಮಧ್ಯಾಹ್ನದವರೆಗೂ ನೆರವೇರಿತು. ಮತ್ತು ರಸ್ತೆಗಳಲ್ಲಿ ಜನರು ನಿಂತು ದೇವರ ದರ್ಶನ ಪಡೆದರು.
ಕಳೆದ ಎರಡು ವರ್ಷಗಳಿಂದ ಕೊರೋನಾ ಕಾರಣದಿಂದ ಊರಿನ ಹಬ್ಬ ನಡೆದಿರಲಿಲ್ಲ ಆದರೆ ಈ ಬಾರಿ ಅದ್ದೂರಿಯಾಗಿ ನಡೆದು ಜನರು ಖುಷಿಯಾಗಿ ಕುಣಿದು ಕುಪ್ಪಳಿಸಿದರು. ಎನ್‌ಎಸ್ ಪಾಳ್ಯ ಊರಿನ ಜಾತ್ರೆಗೆ ನೂರಾರು ವರ್ಷಗಳ ಇತಿಹಾಸವಿದ್ದು ಮತ್ತು ಬಿಟಿಎಂ ಲೇಔಟ್ ನ 12 ದಿಕ್ಕುಗಳು ಇರುವಂತಹ ದೇವಸ್ಥಾನಗಳಿಂದ ಮುಖ್ಯ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಲಾಗುವುದು.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
25/04/2022 10:38 pm