ಬೆಂಗಳೂರು: ನಗರದ ಮಲ್ಲೇಶ್ವರದ ಗಂಗಮ್ಮ ದೇವಿ ದೇವಸ್ಥಾನಕ್ಕೆ ಕೂಡ ಪೊಲೀಸರಿಂದ ಶಬ್ದ ಮಾಲಿನ್ಯ ಮಾಡದಂತೆ ವಾರ್ನಿಂಗ್ ನೀಡಿರುವುದು ಬೆಳಕಿಗೆ ಬಂದಿದೆ. ನಿನ್ನೆ ಹತ್ತಿರದ ಪುರಾತನ ದೇವಾಲಯವಾದ ವೇಣುಗೋಪಾಲಸ್ವಾಮಿ ದೇವಸ್ಥಾನಕ್ಕೆ ನೊಟೀಸ್ ನೀಡಿದ್ದು ವಿವಾದಕ್ಕೆ ಕಾರಣವಾಗಿತ್ತು ಈಗ ದೇವಸ್ಥಾನಗಳನ್ನೇ ಗುರಿಯಾಗಿಸಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.
ನಿನ್ನೆ ಪೊಲೀಸ್ ಸಿಬ್ಬಂದಿಗಳಿಂದ ಮೌಖಿಕವಾಗಿ ನೋಟಿಸ್ ನೀಡಲಾಗಿದೆ. ಹೆಚ್ಚು ಧ್ವನಿವರ್ಧಕ ಬಳಸದಂತೆ ಸೂಚಿಸಿದ್ದಾರೆ. ಹೈಕೋರ್ಟ್ ಆದೇಶದಂತೆ ನಿಯಮ ಪಾಲಿಸಿ. ಹೆಚ್ಚು ಧ್ವನಿವರ್ಧಕಗಳನ್ನ ಬಳಸಬೇಡಿ ಎಂದು ಹೇಳಿದ್ದಾರೆ. ನಮ್ಮ ದೇವಸ್ಥಾನದಲ್ಲಿ ಇಲ್ಲಿಯವರೆಗೆ ಮೈಕ್ ಬಳಸಿಲ್ಲ ಎಂದು ಗಂಗಮ್ಮದೇವಿ ದೇವಸ್ಥಾನದ ಅಧ್ಯಕ್ಷ ಸುಧಾಕರ್ ತಿಳಿಸಿದ್ದಾರೆ.
ಹಬ್ಬದಂದು ವಿಶೇಷ ಪೂಜೆ ವೇಳೆ ಅನುಮತಿ ಪಡೆಯುತ್ತೇವೆ. ಪೊಲೀಸರ ಅನುಮತಿ ಪಡೆದೇ ಧ್ವನಿವರ್ಧಕ ಬಳಸುತ್ತೇವೆ. ನೋಟಿಸ್ ಕೊಟ್ಟಿಲ್ಲ, ಮೌಖಿಕವಾಗಿ ಎಚ್ಚರಿಸಿದ್ದಾರೆ ಅಷ್ಟೆ ಎಂದರು.
PublicNext
22/04/2022 04:25 pm