ದೇವನಹಳ್ಳಿ: ದೇವಾಲಯ ಧಾರ್ಮಿಕ ಕೇಂದ್ರ ಮಾತ್ರವಲ್ಲ, ಸಮಾಜವನ್ನು ತಿದ್ದಿ ಸನ್ಮಾರ್ಗದತ್ತ ಕೊಂಡೊಯ್ಯುವ ವಿದ್ಯಾ ಕೇಂದ್ರವೂ ಹೌದು. ಹಸಿದವರಿಗೆ ಅನ್ನ ನೀಡುವ, ಅಸಹಾಯಕರಿಗೆ ಅಭಯ ನೀಡುವ, ಜೀವನ ಮೌಲ್ಯ ಕಲಿಸೋ ಪುಣ್ಯ ತಾಣಗಳೆಂಬುದೂ ಸರ್ವ ವೇದ್ಯ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯ ಯಲಿಯೂರು ಶ್ರೀವೀರಾಂಜನೇಯ ಸ್ವಾಮಿ ದೇವಾಲಯದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದೆ. ವಿಮಾನಗೋಪುರ, ಮಹಾದ್ವಾರ ಹಾಗೂ ಶ್ರೀರಾಮ- ಲಕ್ಷ್ಮಣರನ್ನು ಹೆಗಲ ಮೇಲೆ ಕೂರಿಸಿಕೊಂಡ ಶ್ರೀ ವೀರಾಂಜನೇಯ ಸ್ವಾಮಿಯ 21 ಅಡಿಯ ಭವ್ಯ ಪ್ರತಿಮೆಯ ಅನಾವರಣ ನಡೆಯಿತು.
ಯಲಿಯೂರಿನ ಹೈಸ್ಕೂಲ್ ಬಳಿಯ ಶ್ರೀವೀರಾಂಜನೇಯ ಸ್ವಾಮಿ ದೇವಾಲಯ ಈಗ ಆಸ್ತಿಕರ ಆಕರ್ಷಣೆಯ ಕೇಂದ್ರಬಿಂದು. ಹತ್ತು ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ಆಗಮಿಸಿ, ದೇವರ ದರ್ಶನ ಪಡೆದರು.
Kshetra Samachara
14/04/2022 11:39 am