ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು:ಯಲಹಂಕದ ಶಿವಹಳ್ಳಿಯಲ್ಲಿ ಶ್ರೀ ರಾಮ ನವಮಿ ಸಡಗರ-ಸಂಭ್ರಮ

ಯಲಹಂಕ: ಇಂದು ಶ್ರೀರಾಮನವಮಿ ಪ್ರಯುಕ್ತ ರಾಜ್ಯ ದೇಶದೆಲ್ಲೆಡೆ ಸಂಭ್ರಮ ಮನೆ ಮಾಡಿದೆ. ಯಲಹಂಕದ ಜಕ್ಕೂರು ರಸ್ತೆ ಶಿವನಹಳ್ಳಿ ಅಭಯಾಂಜನೇಯ ದೇವಾಲಯದ ಬಳಿ ದೊಡ್ಡಮಟ್ಟದಲ್ಲಿಯೇ ಪಾನಕ, ಮಜ್ಜಿಗೆ, ಕೋಸಂಬರಿ ಸಿದ್ಧತೆ ಭರ್ಜರಿಯಾಗಿ ನಡೆಯುತ್ತಿದೆ. ಶ್ರೀರಾಮನವಮಿ ಪ್ರಯುಕ್ತ 2 ರಿಂದ 3 ಸಾವಿರ ಜನಕ್ಕೆ ಪಾನಕ-ಮಜ್ಜಿಗೆ- ಕೋಸಂಬರಿ ವಿತರಣೆ ನಡೆಯಲಿದೆ. ಸ್ವಯಂಪ್ರೇರಿತರಾಗಿ ಭಕ್ತರೆ ವ್ಯವಸ್ಥೆ ಮಾಡಿಕೊಂಡು ಶ್ರೀರಾಮನವಮಿ ಹಬ್ಬದಂದು ಪಾನಕ ಮಜ್ಜಿಗೆ ವಿತರಿಸುತ್ತಾರೆ..

15 ವರ್ಷಗಳ ಹಿಂದೆ ನಿರ್ಮಾಣಗೊಂಡ ಈ ದೇವಾಲಯದಲ್ಲಿ ಶ್ರೀರಾಮನವಮಿ ಪ್ರಯುಕ್ತ‌ ವಿಶೇಷ ಪೂಜೆ ನಡೆಯುತ್ತದೆ. ಜಕ್ಕೂರು ಮುಖ್ಯರಸ್ತೆ ಶಿವನಹಳ್ಳಿ, ಸುರಭಿಲೇಔಟ್ ಸುತ್ತಮುತ್ತಲ ಸಾವಿರಾರು ಜನ ಶ್ರೀರಾಮನವಮಿ ಹಬ್ಬದಂದು ದೇವರಿಗೆ ಪೂಜೆ ಸಲ್ಲಿಸುತ್ತಾರೆ. ಭಕ್ತರೇ ಸೇರಿಕೊಂಡು ನಿರ್ಮಿಸಿರುವ ಆಂಜನೇಯ ದೇವಸ್ಥಾನ ಬಳಿಯ ಪಾನಕ , ಮಜ್ಜಿಗೆ ಸಿದ್ಧತೆ ಜೋರಾಗಿದೆ.

ಬೇಸಿಗೆಯ ಬಿಸಿಲಿಗೆ ಜನರ ದಾಹ ತಣಿಸಲು ಎರಡರಿಂದ ಮೂರು ಸಾವಿರ ಜನಕ್ಕೆ ಪಾನಕ, ಮಜ್ಜಿಗೆ ಮತ್ತು ಕೋಸಂಬರಿ ಭರ್ಜರಿಯಾಗಿ ಸಿದ್ದಗೊಂಡಿದೆ..

Edited By :
Kshetra Samachara

Kshetra Samachara

10/04/2022 04:00 pm

Cinque Terre

2.26 K

Cinque Terre

0

ಸಂಬಂಧಿತ ಸುದ್ದಿ