ಬೆಂಗಳೂರು: ರಾಜ್ಯದಲ್ಲಿ ಹಿಂದೂ-ಮುಸ್ಲಿಮರ ನಡುವೆ ಒಂದಲ್ಲಾ ಒಂದು ವಿವಾದ ಹುಟ್ಟಿಕೊಳ್ಳುತ್ತಿವೆ. ನಾವೆಲ್ಲಾ ಒಂದೇ ನಮ್ಮಲ್ಲಿ ಯಾವುದೇ ಭೇದವಿಲ್ಲವೆಂದು ಕೆಲವರು ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಆರಾಮಾಗಿದ್ರೆ ಮತ್ತೊಂದು ಕಡೆ ಬಾಂಧವ್ಯದ ಮೇಲೆ ವಿಷ ಬೀಜ ಬಿತ್ತುವ ಪ್ರಯತ್ನ ನಡೆಯುತ್ತಿವೆ. ಇದೆಲ್ಲದರ ನಡುವೆ ಈಗ ಐತಿಹಾಸಿಕ ಬೆಂಗಳೂರು ಕರಗಕ್ಕೆ ಕಂಟಕ ಎದುರಾಗಿದೆ. ಹಿಂದೂ- ಮುಸ್ಲಿಂ ಸಾಮರಸ್ಯ ಸಂದೇಶ ಸಾರುವ ಕರಗ ಉತ್ಸವ ಮೆರವಣಿಗೆಗೆ ರಾಜ್ಯದ ಸಂಘರ್ಷ ಸಮಸ್ಯೆ ಉದ್ಭವಿಸಿದೆ.
ಪ್ರತಿವರ್ಷದಂತೆ ಈ ಬಾರಿಯೂ ಬೆಂಗಳೂರು ಕರಗ ಉತ್ಸವ ಮೆರವಣಿಗೆ ಸಿದ್ಧತೆ ಶುರುವಾಗಿವೆ. ಆದ್ರೆ ರಾಜ್ಯದಲ್ಲಿ ಹಿಜಾಬ್, ಹಲಾಲ್ ನಂತಹ ಸಂಘರ್ಷ ನಡೆಯುತ್ತಿವೆ. ಹೀಗಾಗಿ ಕರಗ ಉತ್ಸವದ ಮೇಲೂ ಕರಿನೆರಳಿನ ಭೀತಿ ಎದುರಾಗಿದೆ. ಏಕೆಂದರೆ ಕರಗ ಉತ್ಸವ ತಾಯಿಯ ಮೆರವಣಿಗೆ ವೇಳೆ ಪ್ರತಿವರ್ಷವೂ ತಾಯಿಯನ್ನು ದರ್ಗಾಗೆ ಕರೆದುಕೊಂಡು ಹೋಗಲಾಗುತ್ತೆ. ಸದ್ಯ ರಾಜ್ಯದಲ್ಲಿ ನಡೆಯುತ್ತಿರುವ ವಿವಾದಗಳಿಂದಾಗಿ ಈ ಆಚರಣೆಗೆ ಸಮಸ್ಯೆ ಎದುರಾಗಲಿದೆಯಾ ಎಂಬ ಪ್ರಶ್ನೆ ಉದ್ಭವಿಸಿದೆ.
ಕರಗ ಉತ್ಸವ ಮೊದಲಿನಿಂದಲೂ ಹಿಂದೂ- ಮುಸ್ಲಿಂ ಸಾಮರಸ್ಯಕ್ಕೆ ಸಾಕ್ಷಿಯಾಗಿದೆ. ಹೀಗಾಗಿ ಅಪಸ್ವರ ಕೇಳುವ ಮುನ್ನವೇ ಮುಸ್ಲಿಂ ಧರ್ಮಗುರುಗಳು ಎಚ್ಚೆತ್ತುಕೊಂಡಿದ್ದು ಕರಗ ಶ್ರೀ ಧರ್ಮರಾಯಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಈ ಬಗ್ಗೆ ಚರ್ಚಿಸಿದ್ದಾರೆ. ಈ ವರ್ಷ ಹಿಜಾಬ್, ಹಲಾಲ್ ಸಂಘರ್ಷ ಹಿನ್ನೆಲೆ ಮಸ್ತಾನ್ ಸಾಬ್ ದರ್ಗಾ ಧರ್ಮಗುರುಗಳು ಕರಗ ಉತ್ಸವ ಸಮಿತಿ ಸದಸ್ಯರನ್ನು ಭೇಟಿ ಮಾಡಿ ಮಾತನಾಡಿದ್ದಾರೆ.
ಕರಗ ಉತ್ಸವ ತಾಯಿಯ ಮೆರವಣಿಗೆ ಪ್ರತಿವರ್ಷದಂತೆ ನಡೆಯಲಿ. ಪ್ರತಿವರ್ಷದಂತೆ ಮಸ್ತಾನ್ ಸಾಬ್ ದರ್ಗಾಕ್ಕೆ ತಾಯಿ ಆಗಮಿಸಲಿ ಎಂದು ಮನವಿ ಮಾಡಿದ್ದಾರೆ. ಬಳೇಪೇಟೆ ಬಳಿ ಮಸ್ತಾನ್ ಸಾಬ್ ದರ್ಗಾ ಮುಂದೆ ಮೆರವಣಿಗೆ ಬರಲಿ. ಮುಸ್ಲಿಮರ ಸಹಕಾರ, ಪ್ರೀತಿ ಇರುತ್ತೆ. ನಮ್ಮ ಪೂರ್ವಿಕರ ಕಾಲದಿಂದ ನಡೆದುಬಂದ ರೀತಿ ಜರುಗಲಿ ಎಂದು ವಿನಂತಿಸಿದ್ದಾರೆ.
ಆದರೆ, ಈ ಬಗ್ಗೆ ಪ್ರಶಾಂತ್ ಸಂಬರ್ಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Kshetra Samachara
07/04/2022 06:56 pm