ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನಾಡಿನಾದ್ಯಂತ ಮನೆ ಮಾಡಿದ ಯುಗಾದಿ ಸಂಭ್ರಮ: ವಿವಿಧ ದೇಗುಲಗಳಲ್ಲಿ ವಿಶೇಷ ಪೂಜೆ

ಬೆಂಗಳೂರು: ಯುಗಯುಗಾದಿ ಕಳೆದರೂ ಯುಗಾದಿ‌ ಮರಳಿ ಬರುತಿದೆ, ಹೊಸ ಹರುಷಕ್ಕೆ ಹೊಸ ವರುಷಕೆ ಹೊಸತು ಹೊಸತು ತರುತ್ತಿದೆ.. ಹೌದು ಹಾಡೇ ಹೇಳುವ ಹಾಗೆ ಯುಗಾದಿಯ ಹಬ್ಬ ಎಲ್ಲರಿಗೂ ಹೊಸ ಆರಂಭವನ್ನ ತರುತ್ತೆ.. ಹಾಗಾದ್ರೆ ಈ ಹಬ್ಬವನ್ನ ಜನ ಹೇಗೆ ಆಚರಣೆ ಮಾಡ್ತಾರೆ ನೋಡೋಣ ಬನ್ನಿ..

ಎಣ್ಣೆ ಹಚ್ಚಿಕೊಂಡು ಕುಣಿದಾಡುತ್ತಿರುವ ಮಕ್ಕಳು, ಮನೆಬಾಗಿಲಿಗೆ ತೋರಣ ಕಟ್ಟಿ, ಮಾವು-ಬೇವು ಕಟ್ಟಿರುವ ದೃಶ್ಯಗಳು, ನಂತರ ಹೊಸ ಬಟ್ಟೆ ಧರಿಸಿ ಬೇವು-ಬೆಲ್ಲವನ್ನ ಹಿಡಿದು ಎಲ್ಲರಿಗೂ ಹಂಚುವುದು, ಹೀಗೆ ಎಲ್ಲೆಡೆ ಇವತ್ತು ಯುಗಾದಿ ಹಬ್ಬದ ಆಚರಣೆ ಕಂಡುಬಂತು..

ಹೊಸ ವರ್ಷದ ಮೊದಲ ಹಬ್ಬಕ್ಕೆ ದೇವಸ್ಥಾನಗಳಿಗೆ ಹೋಗಿ ದೇವರುಗಳಿಗೆ ನಮಿಸುತ್ತಾ , ದೇವರಿಗೂ ಬೇವು-ಬೆಲ್ಲ ನೈವೇದ್ಯಕ್ಕೆ ಕೊಟ್ಟು, ನಂತರ ಸಮಾಧಿಯ ಬಳಿ ಹೋಗಿ ಪೂಜೆ ಮಾಡಿ, ಮನೆಯಲ್ಲಿ ಮಾಡಿರುವ ಅಡುಗೆಗಳನ್ನ ಇಟ್ಟು , ಪೂಜೆ ಮಾಡೋದು ಇದೆಲ್ಲವೂ ಯುಗಾದಿಯ ಸಂಪ್ರದಾಯ, ಇನ್ನೂ ಇವತ್ತಿನ ಹಬ್ಬವನ್ನ ಮುಗಿಸಿದ ಜನ ನಾಳೆಯ ಹೊಸತೊಡಕಿಗೆ ಪ್ರಿಪೇರ್ ಆಗ್ತಿದ್ದಾರೆ.. ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ಕೊಡದೇ ನಾಳೆಯ ಹೊಸತೊಡಕನ್ನೂ ಆಚರಿಸಿ

ರಂಜಿತಸುನಿಲ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು

Edited By : Manjunath H D
Kshetra Samachara

Kshetra Samachara

02/04/2022 04:18 pm

Cinque Terre

1.86 K

Cinque Terre

0

ಸಂಬಂಧಿತ ಸುದ್ದಿ