ಬೆಂಗಳೂರು: ಹಲಾಲ್ ಮಾಂಸ ಖರೀದಿ ನಿಷೇಧ ವಿಚಾರದಲ್ಲಿ ಸಾಕಷ್ಟು ಪರ ವಿರೋಧ ಚರ್ಚೆ ನಡೆಯುತ್ತಿದೆ. ಈ ಪರ ವಿರೋಧ ಚರ್ಚೆ
ಸಮುದಾಯಗಳ ಮಧ್ಯೆ ಶಾಂತಿ ಸುವ್ಯವಸ್ಥೆ ಹಾಳು ಮಾಡುತ್ತಿದೆ. ಹಲಾಲ್ ಮಾಂಸದ ವಿರುದ್ಧ ಕ್ಯಾಂಪೇನ್ ಮಾಡುತ್ತಿರುವವರ ಮೇಲೆ ಕ್ರಮ ಕೈಗೊಳ್ಳಿ ಎಂದು ವಕೀಲ ಎ ಪಿ ರಂಗನಾಥ್ ನೇತೃತ್ವದ ನಿಯೋಗ ಕಮಿಷನರ್‌ಗೆ ದೂರು ನೀಡಿದ್ದಾರೆ.
ಪ್ರಶಾಂತ್ ಸಂಬರ್ಗಿ, ಪುನೀತ್ ಕೆರೆಹಳ್ಳಿ, ಕಾಳಿಸ್ವಾಮಿ ಸೇರಿ ಹಲವರ ವಿರುದ್ಧ ಕ್ರಮ ಜರಯಗಿಸಿ ಎಂದು ಪೊಲೀಸ್ ಆಯುಕ್ತ ಕಮಲ್ ಪಂತ್‌ಗೆ ದೂರು ಸಲ್ಲಿಸಲಾಗಿದೆ.
ಒಂದು ಟ್ವೀಟ್ ಮಾಡಿದ್ದಕ್ಕೆ ನಟ ಚೇತನ್ ಅರೆಸ್ಟ್ ಮಾಡಿದ್ರು. ಈಗ ಪ್ರಚೋದನಕಾರಿ ಹೇಳಿಕೆ ನೀಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ ಎಂದು ವಕೀಲರ ನಿಯೋಗವು ದೂರಿನಲ್ಲಿ ತಿಳಿಸಿದೆ. ಎಪಿ ರಂಗನಾಥ್ ಜೊತೆ ಹಿರಿಯ ವಕೀಲ ಬಾಲನ್, ಜಗದೀಶ್ ಸೂರ್ಯಮುಕುಂದ್ ರಾಜ್ ಸಾಥ್ ನೀಡಿದರು.
PublicNext
01/04/2022 05:14 pm