ಹೊಸಕೋಟೆ: ಗ್ರಾಮದೇವರ ಸಮಾಗಮ ಕಲ್ಕುಂಟೆ ರಂಗನಾಥನ ಪಲ್ಲಕ್ಕಿ ಉತ್ಸವದ ವಿಶೇಷತೆ. ಗ್ರಾಮದ ಎಲ್ಲರೂ ಸಮಾನರೇ. ಇಲ್ಲಿ ಬಡವ ಬಲ್ಲಿದ, ಮೇಲು ಕೀಳೆಂಬ ಭೇದವಿಲ್ಲ. ಗ್ರಾಮದ ಎಲ್ಲಾ ಜನ ಒಗ್ಗಟ್ಟಾಗಿ ಪಲ್ಲಕ್ಕಿ ಉತ್ಸವ ಆಚರಿಸುವದೇ ಕಲ್ಕುಂಟೆ ಜಾತ್ರೆಯ ಶ್ರೇಷ್ಠತೆ. ಈ ವಿಶೇಷತೆಗೆ ಮತ್ತಷ್ಟು ಮೆರುಗು ತಂದಿದ್ದು ಚಿತ್ರನಟ ಪೊಗರು ಖ್ಯಾತಿಯ ಧ್ರುವ ಸರ್ಜಾ ರಂಗನಾಥನಿಗೆ ಪೂಜೆ ಸಲ್ಲಿಸಿ, ಆಕ್ರೆಸ್ಟ್ರಾದಲ್ಲಿ ಭಾಗಿಯಾದ್ದರು.
ಒಂಬತ್ತು ದಿನ ನಡೆಯುವ ಕಲ್ಕುಂಟೆ ಜಾತ್ರಾಮಹೋತ್ಸವದಲ್ಲಿ ಪಲ್ಲಕ್ಕಿ ಉತ್ಸವಕ್ಕೆ ಭಕ್ತರು ದೇಶ ವಿದೇಶಗಳಿಂದ ಆಗಮಿಸಿ ದೇವರ ಕೃಪೆಗೆ ಪಾತ್ರಾರಾಗುತ್ತಾರೆ. ರಾತ್ರಿ ವೇಳೆಯ ಪಲ್ಲಕ್ಕಿ ಉತ್ಸವಕ್ಕೆ ರಂಗನಾಥನ ಜೊತೆ ಗ್ರಾಮದೇವರಾದ ಎಲ್ಲಮ್ಮ, ಮಾರಮ್ಮ, ಮದ್ದೂರಮ್ಮ, ಸಪ್ಪಲಮ್ಮ, ಭೀರಪ್ಪ, ಗಣೇಶ, ಶ್ರೀರಾಮ, ನಾಗಮ್ಮ, ಮುನೇಶ್ವರ ದೇವರುಗಳು ಒಟ್ಟು 21 ಪಲ್ಲಕ್ಕಿ ಜಾತ್ರೆಯ ವಿಶೇಷತೆಗೆ ಮತ್ತಷ್ಟು ಸಾಕ್ಷಿಯಾದವು. ಇನ್ನು ಭೀರಪ್ಪದೇವರಿಗೆ ಭಕ್ತರು ಹರಕೆ ಫಲವಾಗಿ ತಲೆ ಮೇಲೆ ತೆಂಗಿನಕಾಯಿ ಹೊಡೆಯೊ ಪೂಜೆ ಆಕರ್ಷಣೀಯ. ಈ ವೇಳೆ ನಡೆಯೊ ವೀರಗಾರರ ನೃತ್ಯ ಕಣ್ಮನ ಸೆಳೆಯುತ್ತದೆ. ಬೆಂಗಳೂರು ಅಲ್ಲದೇ ದೇಶ, ವಿದೇಶಗಳಲ್ಲಿ ನೆಲೆಸಿರುವ ಕಲ್ಕುಂಟೆ ಗ್ರಾಮಸ್ಥರು 9ದಿನದ ಉತ್ಸವದಲ್ಲಿ ಭಾಗಿಯಾಗ್ತಾರೆ.
ಕತ್ತಲು ಬೆಳಕಿನ ಆಟದಲ್ಲಿ ವಿದ್ಯುತ್ ದೀಪಗಳ ವಿವಿಧ ರೂಪಗಳಲ್ಲಿ ಕಾಣುವ ಪಲ್ಲಕ್ಕಿ ನೋಡುವುದೇ ಆನಂದ. ಈ ಆನಂದಕ್ಕೆ ಚಿತ್ರನಟ ಧ್ರುವ ಸರ್ಜಾ ವಿವಿಧ ಕ್ರೀಡೆಗಳ ವಿಜೇತರಿಗೆ ಬಹುಮಾನ ನೀಡಿ, ಸಂಗೀತಾ ರಸ ಸಂಜೆಯಲ್ಲಿ ಭಾಗಿಯಾಗಿ ಪಲ್ಲಕ್ಕಿ ಉತ್ಸವಕ್ಕೆ ಕಳೆಕಟ್ಟಿದರು. ಎರಡು ವರ್ಷಗಳಿಂದ ಕರೋನಾ ಕಾರಣ ರದ್ದಾಗಿದ್ದ ಕಲ್ಕುಂಟೆ ಜಾತ್ರೆ ಉತ್ಸವ ಎಲ್ಲಾ ವರ್ಷಗಳಿಗಿಂತ ಈ ವರ್ಷ ಹೆಚ್ಚು ಕಳೆಕಟ್ಟಿತ್ತು.
PublicNext
22/03/2022 10:51 pm