ದೊಡ್ಡಬಳ್ಳಾಪುರ: 500 ವರ್ಷಗಳ ಹಿಂದೆ ತಿರುಪತಿಯಿಂದ ಕದ್ದು ತಂದ ವೆಂಕಟರಮಣ ವಿಗ್ರಹವನ್ನ ತೂಬಗೆರೆಯಲ್ಲಿ ಪ್ರತಿಷ್ಠಾಪನೆ ಮಾಡಲಾಗಿದ್ದು ಅಂದಿನಿಂದ ಗ್ರಾಮದಲ್ಲಿ ಸುಖ ಶಾಂತಿ ನೆಲಸಿದ್ದು,ಇಂದು ಪ್ರಸನ್ನ ಲಕ್ಷ್ಮಿ ವೆಂಕಣರಮಣಸ್ವಾಮಿಯ ಬ್ರಹ್ಮರಥೋತ್ಸವ ಅದ್ದೂರಿಯಾಗಿ ನೆರವೆರಿತು.
ತಾಲೂಕಿನ ತೂಬಗೆರೆಯ ಇತಿಹಾಸ ಪ್ರಸಿದ್ದ ಪ್ರಸನ್ನ ಲಕ್ಷ್ಮೀ ವೆಂಕಟರಮಣ ಸ್ವಾಮಿಯ ಬ್ರಹ್ಮರಥೋತ್ಸವವು ಇಂದು ಅದ್ಧೂರಿಯಾಗಿ ನೆರವೇರಿತು. ಶ್ರೀದೇವಿ ಭೂದೇವಿ ಸಮೇತ ವೆಂಕಟೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ದೇವಸ್ಥಾನ ಸುತ್ತಲೂ ಪ್ರದಕ್ಷಿಣೆ ಹಾಕಿಸಿ, ರಥದಲ್ಲಿ ತಂದು ಕೂರಿಸಲಾಯಿತು. ಜೈಕಾರದೊಂದಿಗೆ ಭಕ್ತರು ಬಾಳೇಹಣ್ಣು, ದವನವನ್ನು ತೇರಿಗೆ ಎಸೆದು ಭಕ್ತಿ ಸಮರ್ಪಿಸಿದರು. ಬೆಳಿಗ್ಗೆ ಶ್ರೀನಿವಾಸ ಕಲ್ಯಾಣ ಜರುಗಿತು. ದೇವರಿಗೆ ವಿಶೇಷ ಅಲಂಕಾರ, ಪೂಜೆಗಳು ನಡೆದವು.
ಕಳೆದ ಎರಡು ವರ್ಷದಿಂದ ಕೋವಿಡ್ ಕಾರಣದಿಂದ ಅತ್ಯಂತ ಸರಳವಾಗಿ ರಥೋತ್ಸವ ಆಚರಣೆ ಮಾಡಲಾಗಿತ್ತು. ಈ ಬಾರಿ ಅತ್ಯಂತ ವಿಜೃಂಭಣೆಯಿಂದ ಪ್ರಸನ್ನ ಲಕ್ಷ್ಮಿ ವೆಂಕಣರಮಣಸ್ವಾಮಿಯ ರಥೋತ್ಸವ ನೆರವೇರಿತು.
Kshetra Samachara
18/03/2022 10:55 pm