ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇವನಹಳ್ಳಿ: ಐತಿಹಾಸಿಕ ಕೋಟೆ ಶ್ರೀ ವೇಣುಗೋಪಾಲ ಸ್ವಾಮಿ  ಬ್ರಹ್ಮರಥೋತ್ಸವ

ದೇವನಹಳ್ಳಿ:  ಪಟ್ಟಣದ ಐತಿಹಾಸಿಕ ಕೋಟೆ ಶ್ರೀ ವೇಣುಗೋಪಾಲ ಸ್ವಾಮಿ ಬ್ರಹ್ಮರಥೋತ್ಸವ ಪಟ್ಟಣದ ರಾಜ ಬೀದಿಯಲ್ಲಿ ಮೆರವಣಿಗೆ ಸಾಗುತ್ತಾ ವಿಜೃಂಭಣೆಯಿಂದ ನೆರವೇರಿತು.

ಬ್ರಹ್ಮರಥೋತ್ಸವ ನೋಡಲು ಸುತ್ತಮುತ್ತಲಿನ ಗ್ರಾಮಗಳು ಸೇರಿದಂತೆ ನಾನಾ ಜಿಲ್ಲೆಯಿಂದ ಬಂದಿದ್ದ ಸಹಸ್ರಾರು ಭಕ್ತರು ಬಾಳೆಹಣ್ಣಿಗೆ ದವನ ಸಿಕ್ಕಿಸಿ ರಥಕ್ಕೆ ಎಸೆದು ಪುನೀತರಾದರು.

ಬ್ರಹ್ಮರಥೋತ್ಸವದ ಹಿನ್ನೆಲೆ ಸೂರ್ಯ ಮಂಡಲೋತ್ಸವ, ಶೇಷ ವಾಹನೋತ್ಸವ, ಧ್ವಜ ಪೀಠೋತ್ಸವ, ಬಳೆ ತೊಡಿಸುವ ಶಾಸ್ತ್ರ, ಉಯ್ಯಾಲೋತ್ಸವ, ಕಲ್ಯಾಣ ಗರುಡೋತ್ಸವ ಜರುಗಿತು.

ಇಂದು ಬೆಳಿಗ್ಗೆಯಿಂದ ಸುಪ್ರಭಾತ ಸೇವೆ, ನವಗ್ರಹ ಪೂಜೆ ನಡೆಯಿತು. ಬಳಿಕ ಖಜಾನೆ ಭದ್ರತಾ ಕೊಠಡಿಯನ್ನು ದೇವಾಲಯ ಅಭಿವೃದ್ಧಿ ಸಮಿತಿ ಸದಸ್ಯರ ಸಮ್ಮುಖದಲ್ಲಿ ಜಿಲ್ಲಾಧಿಕಾರಿ‌ ಕೆ.‌ಶ್ರೀನಿವಾಸ್, ಶಾಸಕ ನಿಸರ್ಗ ನಾರಾಯಣಸ್ವಾಮಿ, ತಹಶೀಲ್ದಾರ್  ಸೇರಿದಂತೆ ಪೊಲೀಸ್ ಸಿಬ್ಬಂದಿ ಜೊತೆ ಹೊರತೆಗೆದು ವಜ್ರ ಖಚಿತ ಆಭರಣ ಪರಿಶೀಲಿಸಿ ಬಿಗಿ ಭದ್ರತೆಯಲ್ಲಿ ದೇವಾಲಯಕ್ಕೆ ತರಲಾಯಿತು.

ಅಲ್ಲಿ ರುಕ್ಮಿಣಿ, ಸತ್ಯಭಾಮ ಸಮೇತ ಶ್ರೀ ವೇಣುಗೋಪಾಲ ಸ್ವಾಮಿಗೆ ಅಭಿಷೇಕ ನಂತರ ವಸ್ತ್ರ ಧಾರಣೆ ಮಾಡಿ ಚಿನ್ನ- ಬೆಳ್ಳಿ ಆಭರಣ ತೊಡಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.

ನಂತರ ಅಮೂಲ್ಯ ಆಭರಣಗಳನ್ನು ಉತ್ಸವ ಮೂರ್ತಿಗೆ ತೊಡಿಸಿ ರಥದಲ್ಲಿ ಪ್ರತಿಷ್ಠಾಪಿಸಿ ಪೂಜಿಸಿ,  ರಥೋತ್ಸವಕ್ಕೆ ಚಾಲನೆ ನೀಡ ಲಾಯಿತು. ಬಳಿಕ ಭಕ್ತಾದಿಗಳು ರಥಕ್ಕೆ ಬಾಳೆಹಣ್ಣು ಎಸೆದು ಧನ್ಯರಾದರು.

Edited By : Manjunath H D
Kshetra Samachara

Kshetra Samachara

17/02/2022 11:05 pm

Cinque Terre

1.53 K

Cinque Terre

0

ಸಂಬಂಧಿತ ಸುದ್ದಿ