ಯಲಹಂಕ: ಪ್ರಧಾನಿ ನರೇಂದ್ರ ಮೋದಿಯವರ ಆರೋಗ್ಯ, ಆಯುಸ್ಸು, ಕ್ಷೇಮಾಭಿವೃದ್ಧಿಗಾಗಿ ಇಂದು ಯಲಹಂಕ ಉಪನಗರ ವಾರ್ಡ್ ನಂ. 4ರಲ್ಲಿನ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಮೃತ್ಯುಂಜಯ ಜಪ ಜರುಗಿತು.
ಯಲಹಂಕ ವಿಧಾನಸಭೆ ಕ್ಷೇತ್ರದ 4 ವಾರ್ಡ್ ಗಳ ಮಹಿಳಾ ಕಾರ್ಯಕರ್ತರು, ನಾನಾ ಮೋರ್ಚಾಗಳ ಪ್ರಮುಖರು, ಅಧ್ಯಕ್ಷರು, ಕಾರ್ಯದರ್ಶಿಗಳು, ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು. ಬೆಳಗ್ಗೆ10ಕ್ಕೆ ಆರಂಭವಾದ ಮೃತ್ಯುಂಜಯ ಜಪ 1 ಗಂಟೆ ವರೆಗೆ ನಡೆಯಿತು.
ಪಂಜಾಬ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಜೀವಕ್ಕೆ ಭದ್ರತೆ ಇಲ್ಲದಂತಾಗಿದ್ದು, ದುರದೃಷ್ಟಕರ. ದೇಶದ ಪ್ರಧಾನಿಯವರಿಗೇ ಹೀಗಾದರೆ, ಜನಸಾಮಾನ್ಯರ ಪಾಡೇನು !? ಅಭಿವೃದ್ಧಿ ವಿಚಾರದಲ್ಲಿ ರಾಜಿಯಾಗದ ಮೋದಿ ವಿಶ್ವನಾಯಕರಾಗಿ ಹೊರ ಹೊಮ್ಮುತ್ತಿದ್ದಾರೆ. ಇದನ್ನು ಸಹಿಸಲಾಗದೆ ಪ್ರತಿಪಕ್ಷಗಳು ದ್ವೇಷ-ಮತ್ಸರದಿಂದ ಈ ರೀತಿಯ ಷಡ್ಯಂತ್ರ ಮಾಡುತ್ತಿವೆ ಎಂದು ಬಿಜೆಪಿ, ಮಹಿಳಾ ಮೋರ್ಚಾ ಮುಂದಾಳುಗಳು ಆರೋಪಿಸಿದರು.
Kshetra Samachara
07/01/2022 02:27 pm