ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೊಡ್ಡಬಳ್ಳಾಪುರ : ಘಾಟಿ ಸುಬ್ರಮಣ್ಯ ಕ್ಷೇತ್ರದಲ್ಲಿ 65 ಲಕ್ಷ ಹುಂಡಿ ಹಣ ಸಂಗ್ರಹ

ದೊಡ್ಡಬಳ್ಳಾಪುರ : ಕರ್ನಾಟಕ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಘಾಟಿ ಸುಬ್ರಮಣ್ಯ ಕ್ಷೇತ್ರದಲ್ಲಿ ಇಂದು ಹುಂಡಿ ಹಣ ಎಣಿಕೆ ಮಾಡಲಾಗಿದ್ದು, ಡಿಸೆಂಬರ್ ತಿಂಗಳಲ್ಲಿ 65, 53, 684 ರೂಪಾಯಿ ಹಣ ಭಕ್ತರ ಕಾಣಿಕೆಯಿಂದ ಸಂಗ್ರಹವಾಗಿದೆ.

ಪ್ರತಿ ತಿಂಗಳು ನಡೆಯುವಂತೆ ಘಾಟಿ ಸುಬ್ರಮಣ್ಯ ಕ್ಷೇತ್ರದಲ್ಲಿ ಇಂದು ಭಕ್ತಾಧಿಗಳ ಸಮ್ಮುಖದಲ್ಲಿ ಹುಂಡಿ ಹಣ ಎಣಿಕೆ ಕಾರ್ಯ ಮಾಡಲಾಯಿತು, ದೇವಾಲಯದ ಕಾರ್ಯ ನಿರ್ವಾಹಕ ಅಧಿಕಾರಿ ಡಿ, ನಾಗರಾಜು ಮತ್ತು ಮುಜರಾಯಿ ಇಲಾಖೆಯ ಸಹಾಯಕ ಆಯುಕ್ತರಾದ ಜಿ.ಜೆ. ಹೇಮಾವತಿ ಮತ್ತು ದೇವಾಲಯದ ಪ್ರಧಾನ ಆರ್ಚಕರಾದ ಸುಬ್ರಮಣ್ಯ ಸ್ವಾಮಿಯವರ ಸಮ್ಮುಖದಲ್ಲಿ ಹುಂಡಿ ಎಣಿಕೆ ಕಾರ್ಯ ಮಾಡಲಾಯಿತು.

19, 600 ರೂಪಾಯಿ ಮೌಲ್ಯದ 4 ಗ್ರಾಂ 800 ಮಿಲಿ ತೂಕದ ಚಿನ್ನ ಮತ್ತು 9,800 ರೂಪಾಯಿ ಮೌಲ್ಯದ 2 ಕೆ.ಜಿ 575 ಗ್ರಾಂ ತೂಕದ ಬೆಳ್ಳಿ ಭಕ್ತರ ಕಾಣಿಕೆ ರೂಪದಲ್ಲಿ ಬಂದಿದೆ, ಹುಂಡಿ ಹಣ ಎಣಿಕೆ ಕಾರ್ಯದಲ್ಲಿ ಭಕ್ತರು ಭಾಗಿಯಾಗಿದ್ದರು.

Edited By : Nagesh Gaonkar
Kshetra Samachara

Kshetra Samachara

03/01/2022 10:09 pm

Cinque Terre

410

Cinque Terre

0

ಸಂಬಂಧಿತ ಸುದ್ದಿ