ದೊಡ್ಡಬಳ್ಳಾಪುರ : ಬೆಂಗಳೂರಿನ ಪ್ರಮುಖ ಧಾರ್ಮಿಕ ಕ್ಷೇತ್ರ ಘಾಟಿ ಸುಬ್ರಮಣ್ಯ ಕ್ಷೇತ್ರದಲ್ಲಿ ಜನವರಿ 4 ರಿಂದ 14 ರವರೆಗೆ ದನಗಳ ಜಾತ್ರೆ ನಡೆಯಲಿದೆ, ಕೋವಿಡ್ ಎರಡು ಡೋಸ್ ತೆಗೆದು ಕೊಂಡವರಿಗೆ ಜಾತ್ರೆಗೆ ಪ್ರವೇಶ ನೀಡುವ ತಿರ್ಮಾನವನ್ನ ಜಿಲ್ಲಾಡಳಿತ ತೆಗೆದುಕೊಂಡಿದೆ.
ದಕ್ಷಿಣ ಕರ್ನಾಟಕದಲ್ಲಿ ಘಾಟಿ ಸುಬ್ರಮಣ್ಯ ದನಗಳ ಜಾತ್ರೆ ಪ್ರಸಿದ್ಧಿಯನ್ನು ಪಡೆದಿದೆ, ದನಗಳ ಜಾತ್ರೆಗೆ ಕರ್ನಾಟಕದ ಹಲವು ಜಿಲ್ಲೆಗಳಿಂದ ಮತ್ತು ಪಕ್ಕದ ರಾಜ್ಯಗಳಿಂದ ಬರುವ ದನಗಳು ಜಾತ್ರೆ ಸೇರುತ್ತವೆ, ದೂರದ ಬಳ್ಳಾರಿ, ಧಾರವಾಡ, ದಾವಣಗೆರೆ ಮತ್ತು ಗುಲ್ಬರ್ಗಾದಿಂದ ಮತ್ತು ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಗಳ ರೈತರು ಉತ್ತಮ ತಳಿಯ ರಾಸುಗಳನ್ನು ಕೊಳ್ಳಲು ಮತ್ತು ಮಾರಲು ಬರುತ್ತಾರೆ. ಜಾತ್ರೆಗೆ ಬರುವ ರೈತರಿಗೆ ಕುಡಿಯುವ ನೀರು ಮತ್ತು ಊಟದ ವ್ಯವಸ್ಥೆ ಮತ್ತು ವಸತಿ ವ್ಯವಸ್ಥೆಯನ್ನು ಮಾಡಲಾಗಿದೆ. ರಾಸುಗಳಿಗೆ ನೀರು ಮತ್ತು ಮೇವಿನ ವ್ಯವಸ್ಥೆ ಮತ್ತು ಪಶು ಆಸ್ಪತ್ರೆ ವ್ಯವಸ್ಥೆ ಮಾಡಿಕೊಡಲಾಗಿದೆ.
ಕೊರೊನಾ ಮೂರನೇ ಅಲೆಯ ಭೀತಿ ಇರುವುದರಿಂದ ಕೋವಿಡ್ ನಿಯಮ ಪಾಲನೆ ಕಡ್ಡಾಯ ಮಾಡಲಾಗಿದೆ, ಕೊರೊನಾ ಎರಡು ಡೋಸ್ ಪಡೆದವರಿಗೆ ಮಾತ್ರ ಜಾತ್ರೆಗೆ ಅವಕಾಶ ನಿಡಲಾಗಿದೆ ಮತ್ತು ಜಾನುವಾರುಗಳಿಗೆ ಕಾಲುಬಾಯಿ ರೋಗದ ಲಸಿಕೆ ಹಾಕಿಸಿರಬೇಕು ಎಂದು ದೇವಸ್ಥಾನ ಆಡಳಿತ ಮಂಡಳಿ ಹೇಳಿದೆ.
Kshetra Samachara
24/12/2021 04:59 pm