ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವಾಗ ಸಿಲಿಕಾನ್ ಸಿಟಿಯ ನಿವಾಸಿಗಳು ಮತ್ತು ಪ್ರಯಾಣಿಕರು ಇನ್ನು ಮುಂದೆ ಟ್ರಾಫಿಕ್ ಬಗ್ಗೆ ಚಿಂತಿಸಬೇಕಾಗಿಲ್ಲ. ಏಕೆ ಎಂದು ಆಶ್ಚರ್ಯಪಡುತ್ತೀರಾ? ಇಂದಿನಿಂದ (ಅಕ್ಟೋಬರ್ 10) ಎಚ್ಎಎಲ್ ವಿಮಾನ ನಿಲ್ದಾಣದಿಂದ ಕೇವಲ 15 ನಿಮಿಷಗಳಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪಬಹುದು.
ಅರ್ಬನ್ ಏರ್ ಮೊಬಿಲಿಟಿ ಕಂಪನಿ ಬ್ಲೇಡ್ ಇಂಡಿಯಾ ಅಕ್ಟೋಬರ್ 10 ರಿಂದ ಬೆಂಗಳೂರು ವಿಮಾನ ನಿಲ್ದಾಣ ಮತ್ತು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ವಿಮಾನ ನಿಲ್ದಾಣದ ನಡುವೆ ಹೆಲಿಕಾಪ್ಟರ್ ಸೇವೆಯನ್ನು ಪ್ರಾರಂಭಿಸುತ್ತಿರುವುದರಿಂದ ಈ 15 ನಿಮಿಷಗಳ ಪ್ರಯಾಣದ ಸಮಯ ಸಾಧ್ಯವಾಗುತ್ತದೆ.
ಪ್ರಯಾಣಿಕರು ಈಗ ಟ್ರಾಫಿಕ್‌ನಲ್ಲಿ 3 ಗಂಟೆ ಯಾತನಾಮಯ ಪ್ರಯಾಣದ ಬದಲಾಗಿ 15 ನಿಮಿಷಗಳಲ್ಲೇ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪಬಹುದು. ಮುಂದುವರಿದು ಬ್ಲೇಡ್ ಕಂಪೆನಿ ವೈಟ್‌ಫೀಲ್ಡ್ ಮತ್ತು ಎಲೆಕ್ಟ್ರಾನಿಕ್ ಸಿಟಿಯಿಂದಲೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನಕ್ಕೆ ಹೆಲಿಕಾಪ್ಟರ್ ಸೇವೆ ಆರಂಭಿಸಲಿದೆ.
ನೀವು ಈಗ ಹೆಣ್ಣೂರಿನ ಬಿಕೆ ಹಳ್ಳಿಯಲ್ಲಿರುವ ಬ್ಲೇಡ್ ಹೆಲಿಪ್ಯಾಡ್‌ನಿಂದ 15 ನಿಮಿಷಗಳಲ್ಲಿ ಬೆಂಗಳೂರು ಸಿಟಿ ಸೆಂಟರ್‌ಗೆ ತಲುಪಬಹುದಾಗಿದೆ. ಏರ್‌ಪೋರ್ಟ್ ಟರ್ಮಿನಲ್‌ನಿಂದ 10 ನಿಮಿಷಗಳ ಹೆಲಿಕಾಪ್ಟರ್ ಸೇವೆ ಪ್ರಾರಂಭವಾಗಿದೆ. ವಿಮಾನ ನಿಲ್ದಾಣದ ನಿರ್ಗಮನ ಟರ್ಮಿನಲ್‌ನಲ್ಲಿ ಬ್ಲೇಡ್ ಹೆಲಿಪ್ಯಾಡ್ ಮತ್ತು ಪಿಕ್ ಅಪ್ ಪಾಯಿಂಟ್ 2 ನಡುವೆ ಬ್ಲೇಡ್ ಚಾಪರ್ ನಿಮ್ಮ ಪ್ರಯಾಣ ಸಗಮಗೊಳಿಸುತ್ತದೆ ಎಂದು ಕಂಪನಿ ಹೇಳಿದೆ.
Kshetra Samachara
10/10/2022 05:22 pm