ಬೆಂಗಳೂರು: ರಾಜ್ಯ ರಾಜಕೀಯದ ಟ್ರಬಲ್ ಶೂಟರ್ ಆಗಿದ್ದ ಅನಂತಕುಮಾರ್, ಬಿಎಸ್ ಯಡಿಯೂರಪ್ಪ ನವರ ಜೊತೆಗೂಡಿ ರಾಜ್ಯದಲ್ಲಿ ಬಿಜೆಪಿ ಅಭಿವೃದ್ದಿ ಹೊಂದಲು ಪ್ರಮುಖ ಕಾರಣ ಎಂದು ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್ ಹೇಳಿದರು.
ಬೆಂಗಳೂರಿನಲ್ಲಿ ದಿವಂಗತ ಅನಂತಕುಮಾರ್ ಅವರ 63 ನೇ ಜನ್ಮದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಎ-ಚಾಟ್ ಅನಂತಕುಮಾರ್ ಸಾಂಸ್ಕೃತಿಕ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದರು. ಅನಂತಕುಮಾರ್ ಅವರು ಮಾಡಿರುವ ಕೆಲಸಗಳು ಇಂದಿಗೂ ಅವರನ್ನ ಜೀವಂತವಾಗಿಟ್ಟಿವೆ. ತಳಮಟ್ಟದಿಂದ ರಾಷ್ಟ್ರೀಯ ಮಟ್ಟಕ್ಕೆ ಬೆಳೆದ ರೀತಿ ಬಹಳ ರೋಚಕವಾದದ್ದು. ಎಬಿವಿಪಿಯಲ್ಲಿ ಅವರ ಒಡನಾಟ ಪ್ರಾರಂಭವಾಯಿತು.
ನನ್ನ ರಾಜಕೀಯ ಗುರುಗಳು ಅನಂತಕುಮಾರ್ ಎಂದರೆ ತಪ್ಪಾಗಲಾರದು. ತಾವೊಬ್ಬರೇ ನಾಯಕರಾಗಲಿಲ್ಲ, ನನ್ನಂತಹ ನೂರಾರು ನಾಯಕರನ್ನು ಬೆಳೆಸಿದ ಖ್ಯಾತಿ ಅವರದ್ದು. ರಾಜ್ಯದಲ್ಲಿ ಬಿಜೆಪಿಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ರಾಜ್ಯದ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಸದಾ ಮುಂಚೂಣಿಯಲ್ಲಿದ್ದು, ಟ್ರಬಲ್ ಶೂಟರ್ ಎಂದೇ ಖ್ಯಾತಿಯಾಗಿದ್ದರು ಎಂದರು.
Kshetra Samachara
22/09/2022 10:44 pm